Thursday, November 30, 2023
spot_imgspot_img
spot_imgspot_img

99 ಸಲ ಟ್ರಾಫಿಕ್​ ರೂಲ್ಸ್​​ ಬ್ರೇಕ್​​ ಮಾಡಿ, 100ನೇ ಬಾರಿಗೆ ಸಿಕ್ಕಿಬಿದ್ದ ನೃತ್ಯ ಸಂಯೋಜಕ

- Advertisement -G L Acharya panikkar
- Advertisement -

ನೃತ್ಯ ಸಂಯೋಜಕನೊಬ್ಬ 99 ಬಾರಿ ಟ್ರಾಫಿಕ್​ ರೂಲ್ಸ್ ಬ್ರೇಕ್​​ ಮಾಡಿದ್ದು, 100ನೇ ಬಾರಿ ಉಲ್ಲಂಘನೆ ಮಾಡಿದಾಗ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರು ನಗರದ ಮೈಕೋ ಲೇಔಟ್ ಬಳಿ ನಡೆದಿದೆ.

ಬೆಂಗಳೂರಿನ ಬಿಳೇಕಹಳ್ಳಿ ನಿವಾಸಿ ನೃತ್ಯ ಸಂಯೋಜಕ ಹಸನ್ ರೆಹಮಾನ್ ಟ್ರಾಫಿಕ್ ರೂಲ್ ಬ್ರೇಕ್ ಮಾಡಿದ ಯುವಕ.

ಈತನು ಬಿಟಿಎಂ ಎರಡನೇ ಹಂತದಲ್ಲಿ ಡ್ಯಾನ್ಸ್ ಕ್ಲಾಸ್​​​ ನಡೆಸುತ್ತಿದ್ದು, ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ವಾಹನ ಚಲಾಯಿಸುತ್ತಿದ್ದನು. ಇದರಿಂದ ಇತರ ಸವಾರರಿಗೆ ತೊಂದರೆಯಾಗುತ್ತಿತ್ತು. ರೆಹಮಾನ್​​ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾನೆ ಮಾಡುತ್ತಿರುವ ದೃಶ್ಯ ಕಾರಿನ ಡ್ಯಾಶ್‌ಕ್ಯಾಮ್​​ನಲ್ಲಿ ರೆಕಾರ್ಡ್​​ ಆಗಿದೆ.

ಇದೇ ವೇಳೆ ಕಾರು ಚಾಲಕ ಟ್ರಾಫಿಕ್ ಪೊಲೀಸರ ಆ್ಯಪ್​​ನಲ್ಲಿ ಬೈಕ್ ಮೇಲಿನ ಪ್ರಕರಣ​ಗಳ ಬಗ್ಗೆ ಪರಿಶೀಲಿಸಿದ್ದಾರೆ. ಈ ವೇಳೆ 99 ಪ್ರಕರಣಗಳು, 56 ಸಾವಿರ ರೂ. ದಂಡ ಬಾಕಿ ಇರುವುದು ಪತ್ತೆಯಾಗಿದೆ. ಕೂಡಲೇ ಕಾರು ಚಾಲಕ ಟ್ರಾಫಿಕ್ ಪೊಲೀಸರಿಗೆ ಬೈಕ್ ಫೋಟೋ ತೆಗೆದು ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್​ ಮಾಡಿದ್ದಾರೆ.

ಇದನ್ನು ತಿಳಿದ ಸಂಚಾರ ಪೊಲೀಸರು ಬೈಕ್ ನಂಬರ್ ಪರಿಶೀಲಿಸಿ ಸವಾರನ ಪತ್ತೆ ಹಚ್ಚಿದ್ದಾರೆ. ಕೂಡಲೇ ಬೈಕ್​​ ಇದ್ದ ಸ್ಥಳಕ್ಕೆ ತೆರಳಿ ಸೀಜ್​ ಮಾಡಿದ್ದಾರೆ.
ಅವರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದ್ದು, 56,000 ಪಾವತಿಸಲು ರೆಹಮಾನ್‌ ಅವರಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಎರಡು ತಿಂಗಳಲ್ಲಿ ದಂಡವನ್ನು ತುಂಬಲು ವಿಫಲವಾದರೇ, ಅವರ ವಾಹನವನ್ನು ಹರಾಜು ಮಾಡಲಾಗುವುದು ಎಂದು ಮೈಕೋ ಲೇಔಟ್ ಪೊಲೀಸರು ತಿಳಿಸಿದ್ದಾರೆ. ಐಪಿಸಿ ಮತ್ತು ಇಂಡಿಯನ್ ಮೋಟಾರ್ ವೆಹಿಕಲ್ (ಐಎಂವಿ) ಕಾಯ್ದೆಯಡಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಹಸನ್ ರೆಹಮಾನ್ 54 ಬಾರಿ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, 34 ಬಾರಿ ನಂಬರ್ ಪ್ಲೇಟ್ ದೋಷಪೂರಿತ ಪ್ರಕರಣಗಳು, ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದ ಐದು ಪ್ರಕರಣಗಳು, ನೋ ಎಂಟ್ರಿ ಮೂರು ಮತ್ತು ನೋ ಪಾರ್ಕಿಂಗ್, ಜೀಬ್ರಾ ಕ್ರಾಸಿಂಗ್‌ನಲ್ಲಿ ಪಾರ್ಕಿಂಗ್ ಮತ್ತು ಟ್ರಿಪಲ್ ರೈಡಿಂಗ್ ಸೇರಿದಂತೆ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

- Advertisement -

Related news

error: Content is protected !!