Wednesday, July 22, 2026
spot_imgspot_img
spot_imgspot_img

ಬ್ರೆಡ್‌ಲ್ಲಿ ಅಕ್ರಮ ಮಾದಕ ವಸ್ತು ಸಾಗಾಟ; ನೈಜೀರಿಯಾ ಮೂಲದ ಮಹಿಳೆ ಬಂಧನ

- Advertisement -
- Advertisement -

ಬೆಂಗಳೂರು: ತಿನ್ನುವ ಬ್ರೆಡ್‌ಲ್ಲಿ ಮಾದಕವಸ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಮುಂಬೈಯಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ಕೊಕೇನ್ ಸಾಗಾಟ ಮಾಡುತ್ತಿದ್ದಳು. ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 65 ಲಕ್ಷ ರೂ. ಮೌಲ್ಯದ 120 ಗ್ರಾಂ ಕೊಕೇನ್ ವಶಕ್ಕೆ ಪಡೆದಿದ್ದಾರೆ.

ಯಾರಿಗೂ ಅನುಮಾನ ಬಾರದಂತೆ ಬ್ರೆಡ್‌ನ ಒಳಭಾಗದ ಪೀಸ್ ಕಟ್ ಮಾಡಿ, ಅದರೊಳಗೆ ಕೊಕೇಕ್ ಇಟ್ಟು ಡ್ರಗ್ ಸಾಗಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಸದ್ಯ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!