Thursday, August 27, 2026
spot_imgspot_img
spot_imgspot_img

ದುಡ್ಡು ಎಣಿಸದಿದ್ರೆ ರೋಗಿಯನ್ನು ಮುಟ್ಟಲ್ವಂತೆ ಈ ವೈದ್ಯೆ! ಸರ್ಕಾರಿ ವೈದ್ಯೆಯ ಲಂಚಾವತಾರ, ವಿಡಿಯೋ ವೈರಲ್​

- Advertisement -
- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಸರ್ಕಾರಿ ವೈದ್ಯೆಯ ಲಂಚಾವತಾರ ಬೆಳಕಿಗೆ ಬಂದಿದೆ. ಸೂಜಿ ಚುಚ್ಚಿದರೂ, ಬ್ಯಾಂಡೆಂಜ್ ಹಾಕಿದ್ರು ಕಾಸು ಕೊಡಬೇಕಂತೆ. ಹಣ ಇಲ್ಲದೆ ಒಂದು ರೋಗಿಯನ್ನೂ ಈ ವೈದ್ಯೆ ಮುಟ್ಟುವುದಿಲ್ಲವಂತೆ. ಖಾಸಗಿ ಆಸ್ಪತ್ರೆಯಂತೆ ಪ್ರತಿ ಸೇವೆಗೂ ಇಂತಿಷ್ಟು ಹಣ ಅಂತ ಫಿಕ್ಸ್ ಮಾಡಿ, ಪ್ರತಿದಿನ ಸುಲಿಗೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಡಾ. ಕೋಮಲ ಎಂಬಾಕೆ ಉದಯಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿತ್ಯವೂ ದಂಧೆ ನಡೆಸುತ್ತಿದ್ದಾರೆ. ಸಿಬ್ಬಂದಿ ಹಾಗೂ ನರ್ಸ್​ಗಳ ಮೂಲಕ ಕೋಮಲ ಅವರು ರೋಗಿಗಳಿಂದ ಸುಲಿಗೆ ಮಾಡಿಸುತ್ತಿದ್ದಾರೆ ಎಂಬ ಆರೋಪವಿದೆ.

ಅಚ್ಚರಿಯೆಂದರೆ, ಉದಯಗಿರಿ ಪೊಲೀಸ್ ಠಾಣೆಯ ಪಕ್ಕದಲ್ಲೇ ಈ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಬಾಣಂತಿ, ಮಕ್ಕಳು ಹಾಗೂ ವೃದ್ದರಿಂದಲೂ ಈ ವೈದ್ಯೆ ಲಂಚ ಪಡೆಯುತ್ತಿದ್ದಾರೆ. ಇವರ ಲಂಚಾವತಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಲಂಚ ಕೊಟ್ಟರೆ ಮಾತ್ರ ಇಲ್ಲಿ ಚಿಕಿತ್ಸೆ ದೊರೆಯುತ್ತಿದ್ದು, ಡಾ. ಕೋಮಲ ಲಂಚ ಸುಲಿಗೆಗೆ ಕಡಿವಾಣ ಹಾಕುವವರೇ ಇಲ್ವಾ ಅನ್ನೋ ಪ್ರಶ್ನೆ ಎದುರಾಗಿದೆ.

- Advertisement -

Related news

error: Content is protected !!