Monday, June 22, 2026
spot_imgspot_img
spot_imgspot_img

ಮಗಳ ಮೇಲೆ ಅತ್ಯಾಚಾರ ಎಸಗಿದವನನ್ನು ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ಕೊಂದ ಮಾಜಿ ಯೋಧ

- Advertisement -
- Advertisement -
suvarna gold

ಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಆಕೆಯ ತಂದೆ ಕೋರ್ಟ್ ಆವರಣದಲ್ಲಿಯೇ ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದ ಗೋರಖ್’ಪುರದಲ್ಲಿ ನಡೆದಿದೆ. ದಿಲ್’ಶಾದ್ ಹುಸೇನ್, ಬರ್ಹಲ್ಗಂಜ್ ಎಂಬಲ್ಲಿ ಸೈಕಲ್ ರಿಪೇರಿ ಮಾಡುವ ಅಂಗಡಿಯಿಟ್ಟಿದ್ದ. ಈತನ ಶಾಪ್ ಬಳಿಯೇ ಈ ಮಾಜಿ ಯೋಧನ ಮನೆಯಿತ್ತು. 2020ರ ಫೆಬ್ರವರಿ 12ರಂದು ದಿಲ್’ಶಾದ್, ಮಾಜಿ ಯೋಧನ ಅಪ್ರಾಪ್ತ ಪುತ್ರಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. 2021ರ ಮಾರ್ಚ್ 12ರಂದು ಹೈದರಾಬಾದ್’ನಲ್ಲಿ ದಿಲ್?ಶಾದ್ ಅರೆಸ್ಟ್ ಆಗಿದ್ದ. ಆದರೆ ನಂತರದ ದಿನಗಳಲ್ಲಿ ಈತನಿಗೆ ಜಾಮೀನು ಸಿಕ್ಕಿತ್ತು.

ಈ ಅತ್ಯಾಚಾರ ಸಂತ್ರಸ್ತೆಯ ತಂದೆ ಗಡಿ ಭದ್ರತಾ ಪಡೆಯ ಯೋಧನಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರಿಗೀಗ ಸುಮಾರು 50 ವರ್ಷ. ಆರೋಪಿ ದಿಲ್?ಶಾದ್ ಹುಸೇನ್? (30)ನನ್ನು ಗೋರಖ್’ಪುರ ಜಿಲ್ಲೆ ಸಿವಿಲ್ ಕೋರ್ಟ್ ಆವರಣದಲ್ಲಿಯೇ ಕೊಂದಿದ್ದಾರೆ. ಆರೋಪಿಯ ತಲೆಗೆ ನೇರವಾಗಿ ಗುಂಡುಹೊಡೆದು ಹತ್ಯೆ ಮಾಡಿದ್ದಾರೆ. ಆವರಣದಲ್ಲಿ ಆರೋಪಿಯನ್ನು ಕೊಂದ ಮಾಜಿ ಬಿ ಎಸ್ ಎಫ್ ಯೋಧನನ್ನು ಅಲ್ಲಿಯೇ ಇದ್ದ ಪೊಲೀಸರು ಹಿಡಿದಿದ್ದಾರೆ.

vtv vitla

ಗೋರಖ್?ಪುರದ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಆತ ವಿಚಾರಣೆಗೆ ಹಾಜರಾಗಬೇಕಿತ್ತು. ಅದರಂತೆ ಆರೋಪಿ ಕೋರ್ಟ್’ಗೆ ಬಂದಿದ್ದ. ತನ್ನ ಪರ ವಕೀಲನನ್ನು ಭೇಟಿಯಾಗಲು ನ್ಯಾಯಾಲಯ ಆವರಣದೊಳಗೆ ಬಂದಿದ್ದರೂ, ಒಳಗೆ ಪ್ರವೇಶಕ್ಕೆ ತಡೆಯಲಾಯಿತು. ಕೊವಿಡ್ 19 ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆತನನ್ನು ಅಲ್ಲಿ ತಡೆದು ನಿಲ್ಲಿಸಲಾಗಿತ್ತು. ಇದೇ ವೇಳೆ ಅಲ್ಲಿದ್ದ ಮಾಜಿ ಯೋಧ, ಸಂತ್ರಸ್ತೆಯ ಅಪ್ಪ ಆತನ ತಲೆಗೆ ಗುಂಡು ಹೊಡೆದಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ಗೋರಖ್’ಪುರ ಹಿರಿಯ ಪೊಲೀಸ್ ಅಧಿಕಾರಿ ವಿಪಿನ್ ತಾಡಾ, ಮಾಜಿ ಯೋಧನನ್ನು ನಾವು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೇವೆ. ಈ ವೇಳೆ ಅವರು ದಿಲ್’ಶಾದ್ ಕೃತ್ಯದ ಬಗ್ಗೆ ವಿವರಿಸಿದ್ದಾರೆ. 2020ರ ಫೆಬ್ರವರಿಯಲ್ಲಿ ತಮ್ಮ ಮಗಳ ಮೇಲೆ ಆತ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾರೆ. ಇನ್ನು ಮೃತ ಅತ್ಯಾಚಾರ ಆರೋಪಿಯ ಶವವನ್ನು ಪೋಸ್ಟ್’ಮಾರ್ಟಮ್’ಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!