- Advertisement -
- Advertisement -



ಕನ್ನಡಕ್ಕೆ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದ ತಮಿಳು ಮೂಲದ ಖ್ಯಾತ ಸಂಗೀತ ನಿರ್ದೇಶಕ ದೇವ (ದೇವನೇಶನ್ ಚೊಕ್ಕಲಿಂಗಂ) ಅವರು ಇಂದು ನಿಧನರಾಗಿದ್ದಾರೆ.
75 ವರ್ಷದ ದೇವ ಅವರು ಹೃದಯಾಘಾತದಿಂದ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಕನ್ನಡ ಹಾಗೂ ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ಮರೆಯಲಾಗದ ನೂರಾರು ಎವರ್ಗ್ರೀನ್ ಹಾಡುಗಳನ್ನು ಕೊಟ್ಟ ಖ್ಯಾತ ಸಂಗೀತ ನಿರ್ದೇಶಕ ದೇವ ಇಂದು ತಮ್ಮ ಸಂಗೀತ ಪಯಣವನ್ನು ನಿಲ್ಲಿಸಿದ್ದಾರೆ.
ಕನ್ನಡದ ‘ಅಮೃತವರ್ಷಿಣಿ’ ಚಿತ್ರದ ‘ತುಂತುರು’ ಸೇರಿದಂತೆ ‘ಕೋಟಿಗೊಬ್ಬ’, ‘ಸಿಂಹಾದ್ರಿಯ ಸಿಂಹ’, ‘ಸೈನಿಕ’ ಮಧುರ ಹಾಡುಗಳಿಗೆ ಸಂಗೀತ ನೀಡಿದ್ದ ದೇವ ಅವರ ಅಗಲಿಕೆಗೆ ಸಂಗೀತ ಲೋಕ ಕಂಬನಿ ಮಿಡಿದಿದೆ.
- Advertisement -








