Friday, May 3, 2024
spot_imgspot_img
spot_imgspot_img

ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿ ಮಹಿಳೆಯರು ನಕಲಿ ಚಿನ್ನವನ್ನು ಅಸಲಿ ಚಿನ್ನದೊಂದಿಗೆ ಬದಲಿಸಿ ಪರಾರಿ..!

- Advertisement -G L Acharya panikkar
- Advertisement -

ಉಡುಪಿ: ಜ್ಯುವೆಲ್ಲರಿ ಶಾಪಿಗೆ ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಬುರ್ಖಾದಾರಿ ಮಹಿಳೆಯರು ನಕಲಿ ಚಿನ್ನವನ್ನು ಅಸಲಿ ಚಿನ್ನದೊಂದಿಗೆ ಬದಲಿಸಿ ಲಕ್ಷಾಂತರ ರೂಪಾಯಿ ಜ್ಯುವೆಲರ್ಸ್ ಮಾಲೀಕನಿಗೆ ವಂಚಿಸಿ ಪರಾರಿಯದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಕನಕದಾಸ ರಸ್ತೆಯಲ್ಲಿರುವ ಮಾರುತಿ ಜ್ಯುವೆಲರ್ಸ್ ನಲ್ಲಿ ಫೆ.18 ರಂದು ಸಮಯ ಸಂಜೆ 7:30ಕ್ಕೆ ಬಂದ ಸುಮಾರು 35 ರಿಂದ 45 ವರ್ಷ ಪ್ರಾಯದ ಮೂವರು ಬುರ್ಖಾದಾರಿ ಮಹಿಳೆಯರು ಗ್ರಾಹಕರಂತೆ ಅಂಗಡಿಗೆ ಬಂದು 15,800 ಗ್ರಾಂ ತೂಕದ ಒಂದು ಚಿನ್ನದ ಬ್ರೆಸ್ಲೆಟ್ ಖರೀದಿಸಿದ್ದು, ಇದಕ್ಕೆ ಬದಲಾಗಿ ತಮ್ಮ ಬಳಿ ಇದ್ದ 31.490ಗ್ರಾಂ ತೂಕದ ಒಂದು ನೆಕ್ಲೆಸ್ ಮತ್ತು 10.940 ಗ್ರಾಂ ತೂಕದ ಬೆಂಡೋಲೆಗೆ ಹಾಕುವ ಜುಮುಕಿ ನೀಡಿ ಮಾಲೀಕನಿಂದ 48,771/- ರೂಪಾಯಿ ಉಳಿಕೆ ಹಣದ ಪೈಕಿ 19,000/- ರೂಪಯಿಯನ್ನು ನಗದಾಗಿ ಪಡೆದು ಕೊಂಡು ಅಂಗಡಿಯಿಂದ ಸಮಯ 8:30 ಕ್ಕೆ ಹೋಗಿದ್ದು,ಮಹಿಳೆಯರು ವ್ಯವಹಾರದ ಸಮಯದಲ್ಲಿ ಚೌಕಾಶಿ ಮಾಡುವ ವೇಳೆ ಮಾಲೀಕರ ಗಮನವನ್ನು ಬೇರೆಡೆಗೆ ಸೆಳೆದು ಪರೀಕ್ಷೆಯ ಸಮಯ ನೀಡಿದ್ದ ಅಸಲಿ ಚಿನ್ನದ ಆಭರಣಗಳನ್ನು ಹೋಲುವ ನಕಲಿ ಚಿನ್ನಭರಣಗಳನ್ನು ಮಾಲೀಕರಿಗೆ ನೀಡಿ ವಂಚಿಸಿ ಒಟ್ಟು 1,98,923/- ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಈ ಕುರಿತು ಮಾಲೀಕರಾದ ನಿತ್ಯಾನಂದ ಅವರು ಉಡುಪಿಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!