Sunday, July 26, 2026
spot_imgspot_img
spot_imgspot_img

ಬಿ.ಸಿ ರೋಡ್: ಕೇಂದ್ರ ಸರ್ಕಾರದ ವಕ್ಷ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ

- Advertisement -
- Advertisement -

ಬಸ್ ಸಂಚಾರದಲ್ಲಿ ಬದಲಾವಣೆ

ಏ.18 ರಂದು ಕೇಂದ್ರ ಸರ್ಕಾರದ ವಕ್ಷ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಡೀಲ್ ಬಿ.ಸಿರೋಡ್ ರಸ್ತೆಯಲ್ಲಿರುವ ಕಣ್ಣೂರು ಅಡ್ಯಾರ್‌ನ ಷಾ ಗಾರ್ಡನ್ ಮೈದಾನದಲ್ಲಿ ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.

ಈ ಪ್ರತಿಭಟನಾ ಸಮಾವೇಶ ಕಾರ್ಯಕ್ರಮದ ಅವಧಿಯಲ್ಲಿ ಪಡೀಲ್‌ನಿಂದ ಬಿ.ಸಿ.ರೋಡ್ ಕಡೆಗೆ ಹಾಗೂ ಬಿ.ಸಿ.ರೋಡ್ ಕಡೆಯಿಂದ ಪಡೀಲ್ ಕಡೆಗೆ ಹಾದು ಹೋಗುವ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿರುತ್ತದೆ.ಆದುದರಿಂದ ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ KSRTC ಹಾಗೂ ಖಾಸಗಿ ಬಸ್ಸುಗಳನ್ನು ದಿ: 18-04-2025 ರಂದು ಮಧ್ಯಾಹ್ನ 12-00 ಗಂಟೆಯಿಂದ ರಾತ್ರಿ 21-00 ಗಂಟೆಯವರೆಗೆ ಪಡೀಲ್‌ನಿಂದ ಬಿ.ಸಿ.ರೋಡ್ ಕಡೆಗೆ ಹಾಗೂ ಬಿ.ಸಿ.ರೋಡ್ ಕಡೆಯಿಂದ ಪಡೀಲ್ ಕಡೆಗೆ ಬಾರದಂತೆ ನಿರ್ಭಂದಿಸಿದ್ದು, ಬಸ್ಸುಗಳನ್ನು ಈ ಕೆಳಕಂಡ ಪರ್ಯಾಯ ಮಾರ್ಗದಲ್ಲಿ ಸಂಚಾರಿಸಲು ತಿಳಿಸಿದೆ.> ಮೆಲ್ಕಾರು ಜಂಕ್ಷನ್- ಮತ್ತೂರು / ಬಂಟ್ವಾಳ / ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಬರುವ ಬಸ್ಸುಗಳು ಮೆಲ್ಕಾರು ಜಂಕ್ಷನ್ – ಬೊಳಿಯಾರ್ ಸಂಚರಿಸುವುದು. మడమ ದೇರಳಕಟ್ಟೆ – ತೊಕ್ಕೊಟ್ಟು ಮೂಲಕ> ಬಿ.ಸಿ. ರೋಡ್ ಪೊಳಲಿ ದ್ವಾರ- ಬಿ.ಸಿ.ರೋಡ್ ಕಡೆಯಿಂದ ಮಂಗಳೂರು/ಉಡುಪಿ ಕಡೆಗೆ ಸಂಚರಿಸುವ ಬಸ್ಸುಗಳು ಬಿ.ಸಿ ರೋಡ್ ಕೈಕಂಬದ ಪೊಳಲಿ ದ್ವಾರದ ಮೂಲಕ ಕಲ್ಪನೆ ಮಲ್ಲೂರು ರಸ್ತೆ ನೀರುಮಾರ್ಗ ಕುಲಶೇಖರನಂತೂರು ಮೂಲಕ ಮಂಗಳೂರು ಕಡೆಗೆ ಹಾಗೂ ಕೈಕಂಬ – ಬಜಪೆ – ಕಟೀಲ್ -ಮುಲ್ಕಿ ಮೂಲಕ ಉಡುಪಿ ಕಡೆಗೆ ಸಂಚರಿಸುವುದು.> ಪಂಪ್‌ವೆಲ್ ಜಂಕ್ಷನ್- ಮಂಗಳೂರು ನಗರದ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ಬಸ್ಸುಗಳು ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು ಬೊಳಿಯಾರ್ ಮೆಲ್ಕಾರ್ ಮೂಲಕ ಸಂಚರಿಸುವುದು.> ನಂತೂರು ವೃತ್ತ-ಬಿಕರ್ನಕಟ್ಟೆ-ಬೈತುರ್ಲಿ ಜಂಕ್ಷನ್- ಮಂಗಳೂರು ನಗರ / ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕುಲಶೇಖರ – ಬೈತುರ್ಲಿ ನೀರುಮಾರ್ಗ ಕಲ್ಪನೆ ಜಂಕ್ಷನ್ ಬಿಸಿ ರೋಡ್ ಕೈಕಂಬದ ಪೊಳಲಿ ದ್ವಾರದ ಮೂಲಕ ಸಂಚರಿಸುವುದು.> ಕೆ.ಪಿ.ಟಿ. ವೃತ್ತ- ಮಂಗಳೂರು ನಗರ / ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಪದವಿನಂಗಡಿ – ಪಚ್ಚನಾಡಿ ಬೈತುರ್ಲಿ ಮೂಲಕ ಅಥವಾ ಬೋಂದೆಲ್ – ಕಾವೂರು ಬಜಪೆ – ಕೈಕಂಬ ಮೂಡಬಿದ್ರೆ ಮೂಲಕ ಸಂಚರಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದರೆ.

- Advertisement -

Related news

error: Content is protected !!