- Advertisement -
- Advertisement -
ವಿಟ್ಲ: ಬೈಕ್ಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕೆಲಿಂಜ ಶಾಲೆ ಬಳಿ ನಡೆದಿದೆ.
ವಿಟ್ಲದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ ಹಾಗೂ ಕಲ್ಲಡ್ಕ ಕಡೆಯಿಂದ ವಿಟ್ಲಕ್ಕೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರಗಂಭೀರ ಗಾಯಗೊಂಡಿರುತ್ತಾರೆ.
ಬೈಕ್ ಸವಾರನನ್ನು ಬಾಳ್ತಿಲ ನಿವಾಸಿ ನಿಶ್ಚಯ್ ಎಂದು ಗುರುತಿಸಲಾಗಿದೆ.
ಬೈಕ್ ಸವಾರನ ಕಾಲು ತುಂಡಾಗಿ ನೇತಾಡುತ್ತಿದ್ದು, ಸ್ಥಳೀಯರ ಸಹಕಾರದಿಂದ ಆಂಬುಲೆನ್ಸ್ ಮೂಲಕ ಮಂಗಳೂರಿನ ಎ.ಜೆ ಆಸ್ಪತ್ರೆಗೆ ರವಾನಿಸಲಾಗಿದೆ.
- Advertisement -