- Advertisement -
- Advertisement -

ಚಂಡೀಗಢ: ಹರ್ಯಾಣದ ರೋಹ್ಟಕ್ ನಲ್ಲಿ ಬಾಸ್ಕೆಟ್ ಬಾಲ್ ಅಭ್ಯಾಸದ ವೇಳೆ ಬಾಸ್ಕೆಟ್ ಬಾಲ್ ಕಂಬ ಎದೆಯ ಮೇಲೆ ಬಿದ್ದು, 16 ವರ್ಷದ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರನೊಬ್ಬ ಮೃತಪಟ್ಟಿರುವ ಘಟನೆ ನ.26ರಂದು ವರದಿಯಾಗಿದೆ.

ಮೃತ ಬಾಲಕನನ್ನು ಹಾರ್ದಿಕ್ (16) ಎಂದು ಗುರುತಿಸಲಾಗಿದೆ.

ಈ ಘಟನೆಯ ವೀಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಹಿಂದೆ ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಹಾರ್ದಿಕ್ ಪಾಲ್ಗೊಂಡಿದ್ದೆನ್ನಲಾಗಿದೆ.

ಬಾಸ್ಕೆಟ್ ಬಾಲ್ ಕಂಬದ ಬುಟ್ಟಿಗೆ ಬಾಲ್ ಹಾಕಲು ಪ್ರಯತ್ನಿಸಿ, ಅದರಿಂದ ನೇತಾಡಲು ಮುಂದಾದಾಗ, ಕಂಬ ಮುರಿದು ಆತನ ಮೇಲೆ ಬಿದ್ದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ ಎಂದು ವರದಿ ತಿಳಿಸಿದೆ. ಕೂಡಲೇ ಲಖನ್ ಮಾರ್ಜ ಗ್ರಾಮದಲ್ಲಿರುವ ಕ್ರೀಡಾ ಸಂಕೀರ್ಣದ ಒಂದು ಬದಿಯಲ್ಲಿ ಕುಳಿತಿದ್ದ ಇತರ ಆಟಗಾರರು ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


- Advertisement -








