Sunday, June 14, 2026
spot_imgspot_img
spot_imgspot_img

ಬೈಂದೂರು: ಕಾಲೇಜು ವಿದ್ಯಾರ್ಥಿ ನಾಪತ್ತೆ; ಪ್ರಕರಣ ದಾಖಲು..!

- Advertisement -
- Advertisement -

ಬೈಂದೂರು: ಕಾರ್ಕಳ ನಿಟ್ಟೆ ಕಾಲೇಜು ವಿದ್ಯಾರ್ಥಿಯೋರ್ವ ಮನೆಗೆ ಬಂದು ಕಾಲೇಜಿಗೆ ಹೋದವನು ನಾಪತ್ತೆಯಾದ ಘಟನೆ ಬೈಂದೂರಿನಲ್ಲಿ ನಡೆದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ವಿದ್ಯಾರ್ಥಿಯನ್ನು ಬೈಂದೂರು ಸಮೀಪದ ಯಡ್ತರೆ ಗ್ರಾಮದ ಮಹಾಬಲೇಶ್ವರ ಎಂಬವರ ಮಗ ಅಭಿನಂದನ್(20) ಎಂದು ಗುರುತಿಸಲಾಗಿದೆ.

ಅಭಿನಂದನ್ ನಿಟ್ಟೆ ಕಾಲೇಜಿನಲ್ಲಿ ದ್ವಿತಿಯ ವರ್ಷದ ವಿಎಲ್‌ಎಸ್‌ಐ ಪದವಿಯಲ್ಲಿ ಓದಿಕೊಂಡು ಕಾಲೇಜಿನ ಹಾಸ್ಟೇಲ್‌ನಲ್ಲಿ ಉಳಿದುಕೊಂಡಿದ್ದನು. ರಜೆಯಲ್ಲಿ ಬೈಂದೂರು ಮನೆಗೆ ಬಂದು ಹೋಗುತ್ತಿದ್ದನು. ಫೆ.21ರಂದು ಮನೆಗೆ ಬಂದು ಮರುದಿನ ಮನೆಯಿಂದ ಕಾಲೇಜಿಗೆ ಹೋದವನು ಒಂದೆರಡು ಬಾರಿ ಕರೆ ಮಾಡಿದ್ದನು. ಮಹಾಬಲೇಶ್ವರ ಮಾ.26ರಂದು ನಿಟ್ಟೆ ಕಾಲೇಜಿಗೆ ಹೋಗಿ ಮಗನ ಬಗ್ಗೆ ವಿಚಾರಿಸಿದಾಗ ಆತ ಕಾಲೇಜಿಗೆ ರಜೆ ಹಾಕಿ ಕಾಲೇಜಿನಿಂದ ಹೋಗಿರುವ ವಿಚಾರ ತಿಳಿದುಬಂದಿದೆ. ಆತ ಮೊಬೈಲ್ ಕಾಲ್ ಕೂಡ ಸ್ವೀಕರಿಸದೆ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!