Saturday, May 4, 2024
spot_imgspot_img
spot_imgspot_img

ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ; ಧಾರವಾಡದಲ್ಲಿ ಸನ್ಮಾನಿತರಾದ ಮನೋಜ್‌ ಕಡಬ

- Advertisement -G L Acharya panikkar
- Advertisement -

ಉಡುಪಿ: ಮನೋಜ್‌ ಕಡಬ ಅವರು ಕನ್ನಡ ಮಾಧ್ಯಮ ಶಾಲೆ ಉಳಿಸಲು ರಾಜ್ಯಾದ್ಯಂತ ಆಂದೋಲನ ಆರಂಭಿಸಿರುವುದನ್ನು ಪ್ರೇರೇಪಿಸಲು ಅವರನ್ನು – ಧಾರವಾಡದ ಡಿಕೆಎಚ್‌ ಫೌಂಡೇಶನ್‌ 3ನೇ ವಾರ್ಷಿಕೋತ್ಸವದಲ್ಲಿ ತಮ್ಮ ಬಹುನಿರೀಕ್ಷೆಯ ರಾಜನಕ್ಷತ್ರ ಚಲನಚಿತ್ರದ ಪೋಸ್ಟರ್‌ ಬಿಡುಗಡೆ ಸಮಾರಂಭದಂದು ಸನ್ಮಾನಿಸಿ ಗೌರವಿಸಲಾಯಿತು.

ದಂಪತಿಗಳನ್ನು ಉಡುಪಿಯಿಂದ ವಿಶೇಷವಾಗಿ ಆಹ್ವಾನಿಸಲಾಗಿತ್ತು. ಮನೋಜ್‌ ಕಡಬರವರು ಸ್ಪೋಕನ್‌ ಇಂಗ್ಲಿಷ್‌ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಹರಿಕಾರರಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉಡುಪಿ ಮತ್ತು ದಕ ಜಿಲ್ಲೆಗಳಲ್ಲಿ ಈ ಬಗ್ಗೆ ಕೆಲಸ ಮಾಡುತ್ತಿದ್ದು, ಮುಂದಿನ ವರ್ಷ ರಾಜ್ಯದಾದ್ಯಂತ ಈ ಆಂದೋಲನವನ್ನು ಹಮ್ಮಿಕೊಳ್ಳುವ ಯೋಜನೆ ಹಾಕಿಕೊಂಡಿರುವುದನ್ನು ಗುರುತಿಸಿ, ಅವರನ್ನು ಗೌರವಿಸಲಾಗಿದೆ.

ತುಂಬಿ ತುಳುಕಿದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೆಫಿನ್ಸ್‌ ಟ್ರಸ್ಟ್‌ ಆಡಳಿತ ವಿಶ್ವಸ್ಥೆ ಶೆರ್ಲಿ ಮನೋಜ್‌, ಡಿಕೆಎಚ್‌ ಫೌಂಡೇಶನ್‌ ಅಧ್ಯಕ್ಷ-ರಾಜನಕ್ಷತ್ರ ಚಲನಚಿತ್ರದ ನಿರ್ಮಾಪಕ-ನಟ-ಹೈಕೋರ್ಟ್‌ ವಕೀಲ ಡಾ. ಕಲ್ಮೇಶ್‌ ಹಾವೇರಿಪೇಟ, ಕಲ್ಪವೃಕ್ಷ ವುಮೆನ್‌ ಅಂಡ್‌ ರೂರಲ್‌ ಡೆವಲಪ್‌ಮೆಂಟ್‌ ಸಂಸ್ಥೆಯ ಅಧ್ಯಕ್ಷೆ ಗಿರಿಜಾ ಹಿರೇಮಠ, ಹುಬ್ಬಳ್ಳಿಯ ನೆರವು ಸಂಸ್ಥೆ ಅಧ್ಯಕ್ಷೆ ಸಾರಾ ಗೋಕಾವಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!