- Advertisement -
- Advertisement -



ಮಣಿಪಾಲ: ಸ್ಕೂಟರ್ ಹಾಗೂ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಅಲ್ಕಾ ಹಾಗೂ ಸಹಸವಾರೆ ನಯನಾ ಅವರು ಸ್ಕೂಟರ್‌ನಲ್ಲಿ ಬಿಗ್ ಬಾಸ್ ಹೊಟೇಲ್ ಸಮೀಪ ಇರುವ ಯು ಟರ್ನ್ ತಲುಪುತ್ತಿದ್ದಂತೆ ಮಣಿಪಾಲ ಕಡೆಯಿಂದ ಪರ್ಕಳ ಕಡೆಗೆ ಅತೀ ವೇಗದಿಂದ ಆಗಮಿಸಿದ ಕಾರು ಡಿಕ್ಕಿ ಹೊಡೆದಿದೆ.
ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರ ತ್ವನೀರ್ ಕೌರ್‌ಗೂ ಡಿಕ್ಕಿ ಹೊಡೆದಿದ್ದಾನೆ. ಮೂರು ಮಂದಿ ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -