Saturday, August 29, 2026
spot_imgspot_img
spot_imgspot_img

‘ಹಿಂದೂ-ಮುಸ್ಲಿಂ, ರಾಜಕೀಯ ಮಾಡುವುದು ನಮಗೆ ಇಷ್ಟವಿಲ್ಲ’ : ದರ್ಬೆ ಘಟನೆ ಬಗ್ಗೆ ಮುಬಾಶಿರ ಹೇಳಿಕೆ

- Advertisement -
- Advertisement -

ಪುತ್ತೂರು: ದರ್ಬೆಯಲ್ಲಿ ಆ.21ರಂದು ನಡೆದ ಘಟನೆಗೆ ಸಂಬಂಧಿಸಿ ನಾವು ಗಲಾಟೆ ಆದಾಗ ಪೆಟ್ಟು ತಿಂದು ಹಾಸ್ಪಿಟಲ್‌ಗೆ ಹೋಗಿದ್ದೇವೆ. ಅಲ್ಲಿ ಮತ್ತೆ ಆಗಿರುವ ಗಲಾಟೆ ನಮಗೆ ಗೊತ್ತಿಲ್ಲ. ಇದರಲ್ಲಿ ರಾಜಕೀಯ, ಅಧಿಕಾರಿಗಳು, ಹಿಂದೂ-ಮುಸ್ಲಿಂ ಅಂತ ಹೇಳಿ ಮಾಡೋದು ನಮಗೆ ಇಷ್ಟವೂ ಇಲ್ಲ.ಅವರು ಕೇಸ್ ವಾಪಸ್ ತಗೊಳ್ಳೋದಾದರೆ ಮತ್ತು ಹಾಸ್ಪಿಟಲ್ ಖರ್ಚು ನೀಡುವುದಾದರೆ ಹಾಗು ಕ್ಷಮೆ ಯಾಚನೆ ಮಾಡುವುದಾದರೆ ಕೇಸ್ ಮುಂದುವರಿಸುವುದಿಲ್ಲ ಎಂದು ಮಂಡೆಕೋಲು ನಿವಾಸಿ ಮುಬಾಶಿರ ಅವರು ಮಂಗಳೂರಿನಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

ಆ.21ರಂದು ನಾವು ದರ್ಬೆಗೆ ಸಂಗಮ್ ಹೋಟೆಲ್‌ಗೆ ಊಟ ಮಾಡಲಿಕ್ಕೆ ಹೋಗಿದ್ದೆವು. ಅದರ ಬದಿಯಲ್ಲಿ ಸೈಬರ್ ಇತ್ತಲ್ಲ,ಅಲ್ಲಿಗೆ ನಾವು ಆಧಾರ್ ಕಾರ್ಡ್ ಪ್ರಿಂಟ್ ತೆಗೆದುಕೊಳ್ಳೋದು ಮತ್ತು ಬರ್ತ್ ಸರ್ಟಿಫಿಕೇಟ್‌ ಲ್ಯಾಮಿನೇಷನ್ ಮಾಡಲಿಕ್ಕೆ ಇತ್ತು. ಹಾಗೆ ನಾವು ಸಂಗಮ್ ಹೊಟೇಲ್ ಈಚೆ ಇರುವುದರಿಂದ ಅಲ್ಲಿಗೆ ಹೋದದ್ದು. ಅಲ್ಲಿಗೆ ಹೋಗಿ ಆಧಾರ್ ಕಾರ್ಡ್ ಪ್ರಿಂಟ್ ಸರಿ ಮಾಡಿಕೊಟ್ಟರು. ಲ್ಯಾಮಿನೇಷನ್‌ಗೆ ನೀಡಲಾಗಿದ್ದ ಬರ್ತ್ ಸರ್ಟಿಫಿಕೇಟ್ ಅದು ಬರ್ನ್ ಆಗಿ ಹೋಯ್ತು. ಅಲ್ಲಿನ ಸ್ಟಾಫ್ ಮಾಲಕಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದರು.ನಮ್ಮಲ್ಲಿ, ಮೇಡಂ ಬಂದು ತೆಗೆದು ಕೊಡ್ತಾರೆ ಎಂದಾಗ ಅಲ್ಲಿ ನಾವು 15 ನಿಮಿಷ ಅಲ್ಲಿ ವೈಟ್ ಮಾಡಿ, ಅಣ್ಣನ ವೈಫ್ ಮನೆಗೆ ಹೋಗಲಿಕ್ಕೆ ಇತ್ತು. ಅಲ್ಲಿಗೆ ಹೋದಾಗ ಮೇಡಂ ಕಾಲ್ ಮಾಡಿ ಬರಲು ಹೇಳಿದ್ದರು. ಹಾಗೆ ಬಂದಾಗ ಮೇಡಂ ಇರಲಿಲ್ಲ. ಆಗ ಅಲ್ಲಿನ ಸಿಬ್ಬಂದಿ ಬರ್ತ್ ಸರ್ಟಿಫಿಕೇಟ್‌ ಬರ್ನ್ ಆಗಿದೆ ನೀವು ಬೇರೆ ತಗೊಳ್ಳಬೇಕು ಅಂತ ಮೇಡಂ ಹೇಳಿದ್ರು ಎಂದು ತಿಳಿಸಿದ್ದರು. ಆಗ ನಾವು ನೀವು ಮಾಡಿದತಪ್ಪು ಎಂದು ಹೇಳಿದಾಗ ಸಿಬ್ಬಂದಿ ಅಂಗಡಿಯ ಮೇಡಂಗೆ ಫೋನ್ ಕೊಟ್ಟರು. ನಾನು, ನೀವು ಬೇರೆ ತೆಗೆದು ಕೊಡಿ ಅಂತ ಹೇಳೆ. ಆಗ ಅವರು, ಅದು ಈಗ ಆಗುವುದಿಲ್ಲ ನೀವು ಎಂತ ಬೇಕಾದರೂ ಮಾಡಿ ಎಂದರು. ಆಗ ನಾವು ಬೇಡ ಎಂದು, ನಮ್ಮ ಮಕ್ಕಳಿಗೆ ಮದರಸಕ್ಕೆ ಹೋಗಲು ತಡವಾಯಿತು ಎಂದು ಮನೆಗೆ ಹೋಗಲು ಕಾರಿಗೆ ಹತ್ತುವಾಗ ಮೇಡಂ ಮತ್ತು ಅವರ ಮಗ, ಮಗಳು ಬಂದು ನಮ್ಮನ್ನು ಕರೆದರು.

ಸರ್ಟಿಫಿಕೇಟ್ ಬರ್ನ್ ಆಗಿದೆ ಎಂದು ಹೇಳಿ ಬೈದ್ರು. ಆಗ ನಾವು ನಮಗೆ ಸೋಮವಾರಕ್ಕೆ ಪಾಸ್ಪೋರ್ಟ್‌ಗೆ ಅಪಾಯಿಂಟೆಂಟ್ ತೆಗಿಲಿಕ್ಕೆ ಇತ್ತು. ಎಂದಾಗ ಅವರು, ಸೋಮವಾರಕ್ಕೆ ಮಾಡಿಕೊಡಲಿಕ್ಕೆ ಆಗುವುದಿಲ್ಲ. ನಮಗೆ ಇಷ್ಟ ಇದ್ದಾಗ ಮಾಡಿಕೊಡ್ತವೆ ಎಂದರು. ಆಗ ನಾವು ಹೇಳಿದೆವು, ನೀವು 300 ರೂಪಾಯಿ ಕೊಡಿ. ನಾವೇ ಮಾಡ್ತವೆ ಎಂದಾಗ ಅವರು ಆಧಾರ್ ಕಾರ್ಡ್ ಪ್ರಿಂಟ್‌ 200 ರೂಪಾಯಿ ಮೈನಸ್ ಮಾಡಿ 100 ರೂಪಾಯಿ ಕೊಡೇನೆ ಅಂತ ಹೇಳಿದ್ರು. ಆಯ್ತು, 100 ರೂಪಾಯಿ ಕೊಟ್ಟರೆ ಸಾಕು ಅಂತ ಹೇಳಿ, ನಮ್ಮನ್ನು ಆಗದಿಂದ ಸುಮ್ಮನೆ ವೈಟ್ ಮಾಡಿಸಿದ್ದು ಯಾಕೆ ಅಂತ ಹೇಳುವಾಗ ಅವರು ಹೇಳಿದ್ರು, ನೀವು 1000 ರೂಪಾಯಿ ಕೇಳಿದ್ದೀರಾ ಎಂದು ಪ್ರಶ್ನಿಸಿದರು. ನಾವು 1 ಸಾವಿರ ರೂಪಾಯಿ ಕೇಳಿಲ್ಲ. 1000 ರೂಪಾಯಿ, ಹೊಸದು ಮಾಡುವಾಗ ಆಗಿರುವುದು ಎಂದಿದ್ದೆವು.

ಅಲ್ಲಿರುವ ಸ್ಟಾಫ್ ಜೊತೆ ನಾನು ಕೇಳಿದೆ, ನಿಮ್ಮ ಜೊತೆ ಇಷ್ಟು ಹಣ ನಾನು ಕೇಳಿದ್ದೇವಾ ಅಂತ. ಆಗ ಅವರು ಹೇಳಿದ್ರು, 300 ರೂಪಾಯಿ ಕೇಳಿದ್ದೇವೆ ಅಂತ. ಆಗ ಅವರು 100 ರೂಪಾಯಿ ಕೊಡಲಿಕ್ಕೆ ರೆಡಿಯಾಗಿರುವಾಗ, ಅವರ ಮಗ ನಮ್ಮ ‘ಅಮ್ಮನಿಗೆ, ಅಪ್ಪನಿಗೆ ಅಂತೆಲ್ಲ ಬೈದ್ರು. ಆಗ ಅದನ್ನು ವಿಡಿಯೋ ಮಾಡಲಿಕ್ಕೆ ಅಣ್ಣ ಹೋದಾಗ, ಅವರು ಹೊಡೆದದ್ದು. ಅಲ್ಲಿ ಹೊಡೆದ ಕಾರಣ, ಅಲ್ಲಿ ಅಷ್ಟು ಜಗಳ ಆದದ್ದು. ಅವರು ಹೊಡೆದಾಗ, ರಿಟರ್ನ್ಸ್ ಕೂಡ ಅಣ್ಣ ಹೊಡಿಲಿಲ್ಲ. ಆದರೂ ಅವರ ಮಗ ಬೆಂಚಿನಿಂದ ಹಾರಿ ಬಂದು ಅಣ್ಣನಿಗೆ ಸರಿ ಹೊಡೆದಿದ್ದಾರೆ.

ನಾವು ಜಗಳ ಮಾಡಲಿಕ್ಕೆ ಹೋಗುವುದಾದರೆ, ಮಗುವನ್ನೆಲ್ಲ ಕರ್ಕೊಂಡು ಹೋಗಲಿಕ್ಕೆ ಇಲ್ಲ.ಅಲ್ಲಿ ಅವರೇ ಫಸ್ಟ್ ಹೊಡೆದದ್ದು. ನಾವು ಹೊಡಿಲಿಲ್ಲ. ಎಲ್ಲಾ ಮೂವರಿಗೆ ಹೊಡೆದದ್ದು ಅವರೇ. ಅವರ ಮಗ ಬಂದು ಇಬ್ಬರಿಗೆ ಹೊಡೆದ.ಮಗ ಮತ್ತು ಅವರ ಅಮ್ಮ ಸೇರಿ ಬಂದು ಇವನಿಗೆ ಹೊಡೆದರು. ನಂತರ ಕಂಪ್ಲೇಂಟ್ ಕೊಟ್ಟೆವು. ಅಲ್ಲಿ ಮೇಡಂ ಮಗನ ಅರೆಸ್ಟ್ ಆಯ್ತು. ಗಲಾಟೆ ಆದಾಗ ಪೆಟ್ಟು ತಿಂದು ಹಾಸ್ಪಿಟಲ್‌ಗೆ ಹೋಗಿದ್ದೇವೆ. ನಮಗೆ ಅಲ್ಲಿ ಮತ್ತೆ ಅದೆಂಥ ಗಲಾಟೆ ನಮಗೆ ಗೊತ್ತಿಲ್ಲ. ಅಲ್ಲಿ ನಾವು ಹೋದ ನಂತರ ಅಲ್ಲಿ ಜೀಪಿಗೆ ಹತ್ತಿ ಅವರು ಗಲಾಟೆ ಮಾಡಿದ್ದು, ಮತ್ತೆ ಗಲಾಟೆ ಮಾಡಿದ್ದು ನಮಗೆ ಗೊತ್ತಿಲ್ಲ. ನಮಗೆ ಇದರಲ್ಲಿ ಹಿಂದೂ-ಮುಸ್ಲಿಂ ಅಂತ ಹೇಳಿ ಮಾಡೋದು ನಮಗೆ ಇಷ್ಟವೂ ಇಲ್ಲ ಈಗ ಕೇಸ್ ಮುಂದೆ ತಗೊಂಡು ಹೋಗಲಿಕ್ಕೂ ನಮಗೆ ಇಷ್ಟ ಇಲ್ಲ.ನಮಗೆ ಅವರು ಹೊಡೆದದ್ದು ಅವರದು ತಪ್ಪು. ಅವರು ನಮ್ಮ ಬರ್ತ್ ಸರ್ಟಿಫಿಕೇಟ್ ಬರ್ನ್ ಮಾಡಿದ್ದು ತಪ್ಪು.

ನಾವು ಘಟನೆಗೆ ಸಂಬಂಧಿಸಿ ಯಾರಿಗೂ ಕಾಲ್ ಮಾಡಲಿಲ್ಲ. ಫಸ್ಟ್ ಆಫ್‌ ಆಲ್‌, ನಮಗೆ ಇಲ್ಲಿ ಯಾರೂ ಗೊತ್ತಿಲ್ಲ. ನಾವು ಸುಳ್ಯದಿಂದ ಬಂದವರು. ಅವರೇ ಬಂದು ನಮಗೆ ಹೊಡೆದದ್ದು. ಅಲ್ಲಿ ಸೇರಿದವರು ಯಾರೂ ನಮಗೆ ಗೊತ್ತಿರುವವರು ಅಲ್ಲ. ನಮ್ಮ ಸಂಬಂಧದವರೂ ಅಲ್ಲ. ಅವರು ಕೇಸ್‌ ವಾಪಸ್‌ ತಗೊಳ್ಳೋದಾದರೆ, ಈವನ್ ಹಾಸ್ಪಿಟಲ್, ಅದು ಸ್ವಲ್ಪ ಹಣ ಆಗಿದೆ. ಅದನ್ನು ಕೊಡಬೇಕು.ಆಸ್ಪತ್ರೆ ಖರ್ಚು ರೂ. 15,000 ಅಷ್ಟು ಖರ್ಚು ಆಗಿದೆ. ಅದು ಕೊಡಬೇಕು. ಮತ್ತೆ ಮೇಡಂನ ಮಗ ಕ್ಷಮೆ ಕೇಳಬೇಕು. ಮತ್ತೆ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ. ಈಗ ಇದನ್ನು ರಾಜಕೀಯ. ರಾಜಕೀಯ ಅಧಿಕಾರಿಗಳು, ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಮಾಡ್ತಿದ್ದಾರೆ. ಅದೆಲ್ಲ ನಮಗೆ ಇಂಟರೆಸ್ಟ್ ಇಲ್ಲ. ಚಿಕ್ಕ ಘಟನೆ. ಅಷ್ಟು ದೊಡ್ಡದಾಗಬಹುದು ಅಂತ ನಾವು ಅಂದುಕೊಳ್ಳಲಿಲ್ಲ. ಮಕ್ಕಳು ಸಣ್ಣದಿರುವಾಗ, ನಮಗೆ ಈ ತರ ಕೇಸ್‌ನ ಹಿಂದೆ ಹೋಗೋದು ಅಷ್ಟು ಸುಲಭವೂ ಅಲ್ಲ ಎಂದವರು ಹೇಳಿದರು.

- Advertisement -

Related news

error: Content is protected !!