- Advertisement -
- Advertisement -
ವಿ ಹಿ ಪ ಬಜರಂಗದಳ ತೀವ್ರ ಖಂಡನೆ



ಕನ್ಯಾನ: ವಾಹನ ಚಲಾವಣೆಯ ವೇಳೆ ದ್ವಿಚಕ್ರ ವಾಹನ ಸವಾರ ತಮ್ಮ ವಾಹನಕ್ಕೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಕಾರಿನಲ್ಲಿದ್ದ ಅನ್ಯಕೋಮಿನ ಯುವಕರ ತಂಡವೊಂದು ದ್ವಿಚಕ್ರ ಸವಾರನ ಮೇಲೆ ಹಲ್ಲೆ ನಡೆಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಜಂಕ್ಷನ್ ಬಳಿ ನಡೆದಿದೆ.
ಹಲ್ಲೆಯಿಂದ ಗಂಭೀರ ಗಾಯಗೊಂಡ ಪ್ರಕಾಶ್ ಎಂಬವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಖಂಡನೆ ವ್ಯಕ್ತಪಡಿಸಿದ್ದು, ಹಿಂದೂ ಯುವಕನ ಮೇಲೆ ಹಲ್ಲೆಗೈದ ಎಲ್ಲಾ ಅನ್ಯಕೋಮಿನ ಯುವಕರನ್ನು ತಕ್ಷಣವೆ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಪ್ರಮುಖ್ ಪದ್ಮನಾಭ ಕಟ್ಟೆ, ವಿಟ್ಲ ಬಜರಂಗದಳ ಸಂಚಾಲಕ ಚೇತನ್ ಕಡಂಬು ಸೇರಿದಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
- Advertisement -