Tuesday, September 10, 2024
spot_imgspot_img
spot_imgspot_img

ಸಿಬಿಎಸ್ಇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಬೆಂಗಳೂರಿಗೆ ದ್ವಿತೀಯ ಸ್ಥಾನ..

- Advertisement -G L Acharya panikkar
- Advertisement -

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ

ಸಿಬಿಎಸ್ಇ ಪಠ್ಯಕ್ರಮದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ತಿರುವಂಕೂರು ಮೊದಲ ಸ್ಥಾನ (ಶೇ.97.67)ಪಡೆದುಕೊಂಡರೆ, ಬೆಂಗಳೂರು ದ್ವಿತೀಯ (97.05) ಹಾಗೂ ಚೆನ್ನೈ ಮೂರನೇ (96-17)ಸ್ಥಾನದಲ್ಲಿದೆ.ಈ ವರ್ಷದ ಫೆಬ್ರವರಿಯಲ್ಲಿ ನಡೆದ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ನಡೆದಿದ್ದು, ದೇಶಾದ್ಯಂತ 13,109 ಶಾಲೆಗಳ 11,92,961 ಮಕ್ಕಳು ಪಾಲ್ಗೊಂಡಿದ್ದರು. ಇವರಲ್ಲಿ 10,59,080 ಮಕ್ಕಳು ಉತ್ತೀರ್ಣರಾಗಿದ್ದಾರೆ. 1.34 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಈ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 92.15ರಷ್ಟು ಹೆಣ್ಣುಮಕ್ಕಳು ಉತ್ತೀರ್ಣರಾದರೆ, ಶೇ. 86.19ರಷ್ಟು ಗಂಡುಮಕ್ಕಳು ತೇರ್ಗಡೆಗೊಂಡಿದ್ದಾರೆ.
ಈ ಬಾರಿ ಶೇ. 13.24 ಅಂದರೆ 1,57,934 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 38 ಸಾವಿರಕ್ಕೂ ಹೆಚ್ಚು ಮಕ್ಕಳು ಶೇ. 95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!