- Advertisement -
- Advertisement -
ಬೆಂಗಳೂರು: ಸಿಎಂ ತನಗೆ ಆಪ್ತರು ಅಂತ ಹೇಳಿಕೊಂಡು, ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ್ ಬಂಧಿತ ಆರೋಪಿ. ಈತ ಮೂಲತಃ ಹಾವೇರಿ ಜಿಲ್ಲೆಯವನು. ಸರ್ಕಾರಿ ಕೆಲಸ ಅಷ್ಟೇ ಅಲ್ಲದೆ, ಸರ್ಕಾರದ ಕೆಲ ಯೋಜನೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಪೆಂಡಿಂಗ್ ಹಣ ಬಿಡುಗಡೆ ಮಾಡಿಸಿಕೊಡುವ ಭರವಸೆ ನೀಡಿ ಆರೋಪಿ ಶಿವಕುಮಾರ್, ಹಲವರಿಂದ ಹಣ ಪಡೆದಿದ್ದ.
ಬಳಿಕ, ಕೆಲಸ ಕೊಡಿಸದೆ ಇದ್ದಾಗ ವಂಚನೆಗೊಳಗಾದವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಶಿವಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
- Advertisement -