Monday, June 8, 2026
spot_imgspot_img
spot_imgspot_img

ಜೂನ್ 21 ರಿಂದ ಉಚಿತ ವಾಕ್ಸಿನ್ ಘೋಷಣೆ ಬೆನ್ನಲ್ಲೇ, 74 ಕೋಟಿ ಡೋಸ್ ವ್ಯಾಕ್ಸಿನ್​ಗೆ ಆರ್ಡರ್ ನೀಡಿದ ಕೇಂದ್ರ

- Advertisement -
- Advertisement -

ನವದೆಹಲಿ: ಜೂನ್ 21ರಿಂದ ಕೇಂದ್ರ ಸರ್ಕಾರವೇ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡಲು ನಿರ್ಧರಿಸಿರೋದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಬರೋಬ್ಬರಿ 74 ಕೋಟಿ ಡೋಸ್​ನಷ್ಟು ವ್ಯಾಕ್ಸಿನ್​ಗೆ ಆರ್ಡರ್ ನೀಡಿರೋದಾಗಿ ಕೇಂದ್ರ ನೀತಿ ಆಯೋಗ ಮಾಹಿತಿ ನೀಡಿದೆ.

ಬರೋಬ್ಬರಿ 25 ಕೋಟಿ ಕೋವಿ ಶೀಲ್ಡ್, 19 ಕೋಟಿ ಕೊವ್ಯಾಕ್ಸಿನ್​ ಹಾಗೂ 30 ಕೋಟಿ ಬಯಾಲಾಜಿಕಲ್-ಇ ವ್ಯಾಕ್ಸಿನ್​ಗೆ ಕೇಂದ್ರ ಆರ್ಡರ್ ನೀಡಿದೆ. ಅಲ್ಲದೇ ಶೇ.30 ರಷ್ಟು ಅಡ್ವಾನ್ಸ್ ಪೇಯ್ಮೆಂಟ್​​ ನೀಡಿದೆ ಎಂದು ನೀತಿ ಆಯೋಗ ಸದಸ್ಯ ಡಾ.ವಿ.ಕೆ ಪೌಲ್ ತಿಳಿಸಿದ್ದಾರೆ.

- Advertisement -

Related news

error: Content is protected !!