Thursday, March 28, 2024
spot_imgspot_img
spot_imgspot_img

ಕೇಂದ್ರ ಸರ್ಕಾರದಿಂದ ಕೊರೊನಾ ಪರಿಹಾರವಾಗಿ 600 ಲಕ್ಷ ಟನ್​ ಆಹಾರ ಧಾನ್ಯ ಬಿಡುಗಡೆ

- Advertisement -G L Acharya panikkar
- Advertisement -

ಕೊರೊನಾ ಬಿಕ್ಕಟ್ಟಿನಿಂದ 2020- 21 ಹಾಗೂ 2021- 22ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಘೋಷಣೆ ಮಾಡಿತು. ಅದರಲ್ಲೂ ವಲಸೆ ಕಾರ್ಮಿಕರು, ಬಡವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸಿದ ಯೋಜನೆಗಳಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗಿದ್ದು ಹೌದು. ಅದರಲ್ಲಿ ಪ್ರಧಾನ ಮಂತ್ರೊ ಗರೀಬ್ ಕಲ್ಯಾಣ್ ಅನ್ನ ಯೋಜನಾ ಅಡಿಯಲ್ಲಿ ಉಚಿತವಾಗಿ ಆಹಾರ ಧಾನ್ಯವನ್ನು ವಿತರಣೆ ಮಾಡಿದ್ದನ್ನು ಸ್ಮರಿಸಬೇಕಾಗುತ್ತದೆ. ಹಾಗೆ ಕೊರೊನಾ ಬಿಕ್ಕಟ್ಟಿನ 2020- 21 ಹಾಗೂ 2021- 22ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಆಹಾರ ಧಾನ್ಯಗಳ ಪ್ರಮಾಣ 600 ಲಕ್ಷ ಟನ್​ಗಳು.

ಗ್ರಾಹಕ ವ್ಯವಹಾರಗಳ ಸಚಿವಾಲಯದ ದತ್ತಾಂಶಗಳ ಪ್ರಕಾರವಾಗಿ, 600 ಲಕ್ಷ ಟನ್​ಗಳ ಆಹಾರ ಧಾನ್ಯಗಳನ್ನು ಈ ಅವಧಿಯಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ. ಈ ಪೈಕಿ, ಜುಲೈ 14, 2021ರ ತನಕದ ಲೆಕ್ಕಾಚಾರದಂತೆ 400 ಲಕ್ಷ ಟನ್ ಆಹಾರ ಧಾನ್ಯಗಳ ದಾಸ್ತಾನನ್ನು ರಾಜ್ಯಗಳಿಂದ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಬಳಿಯಲ್ಲಿ ಜುಲೈ 1, 2021ರ ತನಕ ಇದ್ದ ಆಹಾರ ಧಾನ್ಯಗಳ ಪ್ರಮಾಣ 900 ಲಕ್ಷ ಟನ್​ಗಳು. ಅದರಲ್ಲಿ 603 ಲಕ್ಷ ಟನ್ ಗೋಧಿ ಮತ್ತು 296 ಲಕ್ಷ ಟನ್ ಅಕ್ಕಿ ಇತ್ತು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾವನ್ನು ಸರ್ಕಾರದಿಂದ 2020ರ ಮಾರ್ಚ್​ನಲ್ಲಿ ಆರಂಭಿಸಲಾಯಿತು. ಅದು ಕೂಡ ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ದೇಶದಾದ್ಯಂತ ಲಾಕ್​ ಡೌನ್​ ಘೋಷಣೆ ಮಾಡಿದಾಗ ಲಕ್ಷಾಂತರ ಮಂದಿ ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಬೇಕಾಯಿತು. ಆ ಸಂದರ್ಭದಲ್ಲಿ ಈ ಯೋಜನೆಯನ್ನು ರೂಪಿಸಲಾಯಿತು. ಚದುರಿ ಹೋದ ವಲಸಿಗರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಉಚಿತ ಆಹಾರ ಧಾನ್ಯವನ್ನು ವಿತರಣೆ ಮಾಡಬೇಕು ಎಂಬ ಉದ್ದೇಶದಿಂದಲೇ ಆರಂಭವಾದ ಕೇಂದ್ರ ಸರ್ಕಾರದ ಯೋಜನೆಯಿದು.

- Advertisement -

Related news

error: Content is protected !!