- Advertisement -
- Advertisement -
ಮಂಗಳೂರು: ಜುಲೈ 31 ರಂದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯಲ್ಲಿ ಈದುಲ್ ಅಝ್’ಹಾ ಆಚರಣೆಗೆ ಚಂದ್ರೋದಯದ ಪ್ರಕಾರ ಖಾಝಿಗಳು ದಿನ ನಿಗದಿ ಮಾಡಿದ್ದಾರೆ. ಜುಲೈ 30 ಹಾಗೂ 31ರಂದು ಸಿಇಟಿ ಪರೀಕ್ಷೆ ಇರುವುದರಿಂದ ಸಹಸ್ರಾರು ಮುಸ್ಲಿಂ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಈದ್ ದಿನದ ಪರೀಕ್ಷೆ ಮುಂದುವರಿಸುವಂತೆ ಸರಕಾರಕ್ಕೆ ವಿನಂತಿಸುವಂತೆ ಮಾಜಿ ಸಚಿವರು, ಮಂಗಳೂರು ಶಾಸಕರಾದ ಯು.ಟಿ.ಖಾದರ್ ಅವರಿಗೆ ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ ಅವರು ವಿನಂತಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯು.ಟಿ.ಖಾದರ್, ಸರಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.
- Advertisement -