Friday, March 29, 2024
spot_imgspot_img
spot_imgspot_img

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ – ಶ್ರೀ ಚಂಡಿಕಾ ಯಾಗ

- Advertisement -G L Acharya panikkar
- Advertisement -

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅ 20ರಂದು ಮಂಗಳವಾರ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ – ಶ್ರೀ ಚಂಡಿಕಾ ಯಾಗ ನಡೆಯಲಿದೆ.

ಬೆಳಿಗ್ಗೆ ಮಂಗಳಾರತಿಯ ಬಳಿಕ ಶ್ರೀ ನಾಗದೇವರಿಗೆ ನಾಗತಂಬಿಲ. ಗಂಟೆ ೯.೩೦ಕ್ಕೆ ಶ್ರೀ ಚಂಡಿಕಾ ಯಾಗವು ಆರಂಭಗೊಂಡು ಮಧ್ಯಾಹ್ನ ಗಂಟೆ ೧೨.೦೦ಕ್ಕೆ ಯಾಗದ ಪೂರ್ಣಾಹುತಿ, ಮಹಾಮಂಗಳಾರತಿ, ಆರಾಧ್ಯದೇವರಿಗೆ ಮಹಾಪೂಜೆ. ಅಪರಾಹ್ಣ ಗಂಟೆ ೨.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಡಿ. ಮನೋಹರಕುಮಾರ್ ಯಕ್ಷಬಳಗ, ಮಂಗಳೂರು ಇವರಿಂದ ಶಾಂಭವಿ ವಿಜಯ ತುಳು ಯಕ್ಷಗಾನ ಬಯಲಾಟ. ರಾತ್ರಿ ಅಷ್ಟಾವಧಾನ ಸೇವೆ, ಮಹಾಪೂಜೆ.

24ನೇ ಶನಿವಾರ ಶ್ರೀ ಶಾರದಾ ಪೂಜೆ- ಮಧ್ಯಾಹ್ನ ಶ್ರೀ ಸರಸ್ವತಿ ಹವನವು ನಡೆಯಲಿದೆ. ಅಪರಾಹ್ನ ಆಯುಧ ಪೂಜೆ-ವಾಹನ ಪೂಜೆ ಜರಗಲಿದೆ. ಈ ಎಲ್ಲಾ ಕಾರ್ಯಕ್ರಮದ ಸಂದರ್ಭ ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!