Friday, April 26, 2024
spot_imgspot_img
spot_imgspot_img

ಬಿಸಿಲು ನಾಡಲ್ಲಿ ಆಲಿಕಲ್ಲು ಮಳೆ; ದಟ್ಟ ಆಲಿಕಲ್ಲಿನಿಂದ ಹಿಮಾಲಯದಂತೆ ಕಂಡು ಬಂದ ಪ್ರದೇಶ

- Advertisement -G L Acharya panikkar
- Advertisement -

ರಾಜ್ಯದಲ್ಲಿ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಅಲ್ಲಲ್ಲಿ ಮಳೆಯಾಗುತ್ತಿದೆ. ಬಿಸಿಲ ನಾಡಿನಲ್ಲಿ ಸುರಿದ ಆಲಿಕಲ್ಲು ಮಳೆಗೆ ರಸ್ತೆ ಮನೆ ಬೆಟ್ಟ ಗುಡ್ಡ ಹಿಮಾವೃತದಂತೆ ಭಾಸವಾಗಿದೆ. ದಟ್ಟ ಆಲಿಕಲ್ಲು ಮಳೆಯಿಂದ ಈ ವಿದ್ಯಾಮಾನ ಸೃಷ್ಟಿಯಾಗಿದೆ. ಕಲಬುರಗಿ ಚಿಂಚೋಳಿ ಕಾಶ್ಮೀರದಂತೆ ಶ್ವೇತ ವರ್ಣದಲ್ಲಿ ಕಂಗೊಳಿಸಿದೆ.

ಕಲಬುರಗಿಯ ಗಡಿ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಅಕಾಲಿಕವಾಗಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಗ್ರಾಮಗಳ ರಸ್ತೆಗಳಲ್ಲಿ ಹಿಮಾಲಯದ ವಾತಾವರಣ ನಿರ್ಮಾಣವಾಗಿತ್ತು. ಚಿಂಚೋಳಿ ತಾಲೂಕಿನ ಗಡಿಗ್ರಾಮಗಳಾದ ಶಿವರಾಂಪುರ, ತೆಲಂಗಾಣದ ಮರಪಲ್ಲಿ, ಕೋಹಿರ್, ಬಂಟಾರಂ, ಪಟ್ಟಲ್ಲುರ್ ಗ್ರಾಮಗಳಲ್ಲಿ ಸತತ ಎರಡು ದಿನಗಳ ಕಾಲ ಆಲಿಕಲ್ಲು ಮಳೆ ಬಿದ್ದಿದೆ. ಬಿರು ಬೇಸಿಗೆಯಲ್ಲಿ ಆಲಿಕಲ್ಲು ಮಳೆ ಕಂಡು ಗ್ರಾಮಸ್ಥರು ದಂಗಾಗಿದ್ದಾರೆ.

- Advertisement -

Related news

error: Content is protected !!