Thursday, April 18, 2024
spot_imgspot_img
spot_imgspot_img

ಚೆಕ್​ ಬೌನ್ಸ್ ಕೇಸ್: ನಟ ಶರತ್ ಕುಮಾರ್ ದಂಪತಿಗೆ ಒಂದು ವರ್ಷ ಜೈಲು!

- Advertisement -G L Acharya panikkar
- Advertisement -

ಚೆನ್ನೈ: 2018 ಚೆಕ್​ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಹಾಗೂ ಸಂಸದ ಶರತ್ ಕುಮಾರ್ ಹಾಗೂ ಅವರ ಪತ್ನಿ ರಾಧಿಕಾಗೆ ಚೆನ್ನೈನ ವಿಶೇಷ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದೆ. ಜೊತೆಗೆ 5 ಕೋಟಿ ರೂಪಾಯಿ ದಂಡವನ್ನೂ ಕೋರ್ಟ್​ ವಿಧಿಸಿದೆ.

ಶರತ್​ ಕುಮಾರ್​ ಮತ್ತು ರಾಧಿಕಾ ಪಾಲುದಾರಿಕೆಯಲ್ಲಿ ಮ್ಯಾಜಿಕ್​ ಫ್ರೇಂ ಸಂಸ್ಥೆಯು 2014ರಲ್ಲಿ ವಿಕ್ರಂ ಪ್ರಭು ಮತ್ತು ಕೀರ್ತಿ ಸುರೇಶ್​ ನಟನೆಯಲ್ಲಿ ‘ವಾಟ್​ ಎ ಮ್ಯಾಜಿಕ್’ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು.

ರೆಡಿಯನ್ಸ್​ ಮೀಡಿಯಾ ಲಿಮಿಟೆಡ್ ಫೈನಾನ್ಸ್​ ಕಂಪನಿಯಿಂದ 1.5 ಕೋಟಿ ರೂಪಾಯಿ ಹಣವನ್ನ ಸಾಲವಾಗಿ ಪಡೆದಿರುವ ಆರೋಪ ಕೇಳಿ ಬಂದಿತ್ತು. ರಾಧಿಕಾ, ಶರತ್​ ಕುಮಾರ್​ ಹಾಗೂ ನಿರ್ಮಾಪಕ ಲಿಸ್ಟಿನ್​ ಸ್ಟೇಪನ್ನ ‘ಮ್ಯಾಝಿಕ್​​ ಪ್ರೇಮ್ಸ್​’ ಸಂಸ್ಥೆಗಾಗಿ ಸಾಲ ಪಡೆದಿದ್ದರು.

ಬಳಿಕ ಮತ್ತೆ ಶರತ್ ಕುಮಾರ್​ ಮ್ಯಾಜಿಕ್ ಪ್ರೇಮ್ಸ್​ ಸಂಸ್ಥೆಗಾಗಿ 50 ಲಕ್ಷ ಹಣವನ್ನ ಮತ್ತೆ ಪಡೆದಿದ್ದರು. ನಂತರ 10 ಲಕ್ಷದಂತೆ ಐದು ಚೆಕ್​ಗಳನ್ನ ನೀಡಿ ಹಣವನ್ನ ಹಿಂತಿರುಗಿಸಿದ್ದರು. ಈ ಚೆಕ್​ಗಳು ಬೌನ್ಸ್​ ಆಗಿತ್ತು. ಈ ಹಿನ್ನೆಲೆಯಲ್ಲಿ ರೇಡಿಯನ್ಸ್​ ಸಂಸ್ಥೆ ಕೋರ್ಟ್​ ಮೊರೆ ಹೋಗಿತ್ತು.

ಕೋರ್ಟ್​ ವಿಚಾರಣೆ ವೇಳೆ ರೇಡಿಯನ್ಸ್​ ಸಂಸ್ಥೆ ಜಾಸ್ತಿ ಬಡ್ಡಿ ವಿಧಿಸುತ್ತಿರೋದ್ರಿಂದ ಹಣವನ್ನ ಈ ಕೂಡಲೇ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದಾದ ಬಳಿಕ ಮತ್ತೆ ಸಾಲ ಮರುಪಾವತಿಗಾಗಿ ಮ್ಯಾಜಿಕ್ ಪ್ರೇಮ್ಸ್​ ಚೆಕ್ ನೀಡಿತ್ತು. ಈ ಚೆಕ್​ ಕೂಡ ಬೌನ್ಸ್​ ಆಗಿತ್ತು ಎನ್ನಲಾಗಿತ್ತು.

ಇನ್ನು ಈ ದಂಪತಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನ ರದ್ದುಮಾಡುವಂತೆ ಕೋರಿ ಮದ್ರಾಸ್ ಹೈಕೋರ್ಟ್​ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್​ ರದ್ದು ಮಾಡಲು ನಿರಾಕರಿಸಿ ಪ್ರಕರಣವನ್ನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು.

- Advertisement -

Related news

error: Content is protected !!