Wednesday, July 22, 2026
spot_imgspot_img
spot_imgspot_img

ಚಿಕ್ಕಮಗಳೂರು: ATM ಮೂಲಕ ಪ್ರೀತಿ ಶುರು, ಜಾತಿ ಸಂಕೋಲೆ ಮೀರಿ ಕೈಹಿಡಿದ ಜೋಡಿ..!

- Advertisement -
- Advertisement -

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಅಪರೂಪದ ಮದುವೆಯೊಂದು ನಡೆದಿದ್ದು, ಎಟಿಎಂನಿಂದ ಪರಿಚಯವಾಗಿ ಪ್ರೀತಿ ಬಲೆಯಲ್ಲಿ ಬಿದ್ದಿದ್ದ ಜೋಡಿ ಇದೀಗ ಜಾತಿ ಸಂಕೋಲೆ ಮೀರಿ ಸಪ್ತಪದಿ ತುಳಿದಿದ್ದಾರೆ.

ಎರಡು ಮನೆಯವರ ಒಪ್ಪಿಗೆ ಪಡೆದು ಪರಿಶಿಷ್ಟ ಜಾತಿಯ ಹುಡುಗಿ ಸಾವಿತ್ರಿ ಹಾಗೂ ಬ್ರಾಹ್ಮಣ ಸಮುದಾಯದ ಯುವಕ ಸಚಿನ್ ಚಿಕ್ಕಮಗಳೂರು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾಮೂಹಿಕ ಮದುವೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂದು ಯುವತಿ ಸಾವಿತ್ರಿ ಹಣ ತೆಗೆದುಕೊಳ್ಳಲು ಎಟಿಎಂಗೆ ಆಗಮಿಸಿದ್ದು, ಯುವಕ ಸಚಿನ್ ಕೂಡ ಇ-ಲಾಬಿಯಲ್ಲಿ ಖಾತೆಗೆ ಹಣ ಹಾಕಿಕೊಳ್ಳಲು ಬಂದಿದ್ದರು. ಇದೇ ವೇಳೆ ಸಾವಿತ್ರಿ ಅವರು ಹಣ ತೆಗೆಯಲು ಪರದಾಡುತ್ತಿದ್ದಾಗ ಸಚಿನ್ ಸಾವಿತ್ರಿಗೆ ಸಹಾಯ ಮಾಡಿದ್ದರು. ಈ ಕಾರಣಕ್ಕೆ ಇಬ್ಬರು ನಂಬರ್ ಶೇರ್ ಮಾಡಿಕೊಂಡು, ಅಲ್ಲಿಂದ ಪರಿಚಯವಾಗಿ ಪ್ರೀತಿ ಶುರುವಾಗಿತ್ತು.

ಇದೀಗ ಎರಡು ಮನೆಯವರನ್ನು ಒಪ್ಪಿಸಿ ಬೌದ್ಧ ಸಂಘಟನೆ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!