- Advertisement -
- Advertisement -


ಚಿಕ್ಕಮಗಳೂರು: ಕುಟುಂಬವೊಂದು ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎಂ.ಸಿ.ಹಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆಗೂ ಮುನ್ನ ಮಂಜುನಾಥ್ ಎಂಬುವವರು ರಕ್ಷಾ ಎನ್ನುವವರ ಜೊತೆ ಸಂಭಾಷಣೆ ನಡೆಸಿದ್ದು, ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ವಾಯ್ಸ್ ಮೆಸೇಜ್ ಹಾಕಿ ಕುಟುಂಬ ಕಾರಿನ ಸಮೇತ ನದಿಗೆ ಹಾರಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಕುಟುಂಬ ಸದಸ್ಯರು ನದಿಗೆ ಹಾರಿದ್ದು, ಇಬ್ಬರು ನೀರುಪಾಲಾಗಿದ್ದಾರೆ. ಓರ್ವರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.



- Advertisement -








