Thursday, April 25, 2024
spot_imgspot_img
spot_imgspot_img

ಗಡಿಯಲ್ಲಿ ಮತ್ತೆ ಚೀನಾ ಕಾಲ್ಕೆರೆದು ಯುದ್ಧಕ್ಕೆ ನಿಲ್ಲುವ ಸಂಭವ

- Advertisement -G L Acharya panikkar
- Advertisement -

ನವದೆಹಲಿ: ಭಾರತ-ಚೀನಾ ಗಡಿ ವಿವಾದ ಕುರಿತ ಮಾತುಕತೆ ಫಲಪ್ರದವಾಗುತ್ತಿದೆ ಅಂತಾ ನಿನ್ನೆಯಷ್ಟೇ ಉಭಯ ದೇಶಗಳು ಹೇಳಿಕೆಯನ್ನ ನೀಡಿದ್ದು. ಲೇಟೆಸ್ಟ್ ವಿಷ್ಯ ಏನಂದ್ರೆ ಗಡಿಯಲ್ಲಿ ಮತ್ತೆ ಚೀನಾ ಕಾಲ್ಕೆರೆದು ಯುದ್ಧಕ್ಕೆ ನಿಲ್ಲುವ ಸಂಭವ ಇದೆ. ಯಾಕಂದ್ರೆ ಚೀನಾ ಸೇನೆಗೆ ಯುದ್ಧಕ್ಕೆ ಸಿದ್ಧರಾಗಿ ಅಂತಾ ಅಧ್ಯಕ್ಷ ಶಿ ಜಿನ್​ ಪಿಂಗ್ ಕರೆ ನೀಡಿದ್ದಾರೆ ಅಂತಾ ವರದಿಯಾಗಿದೆ.

ಚೀನಾದ ಪ್ರಮುಖ ಪತ್ರಿಕೆ ಕ್ಸಿನುವಾ ಈ ವರದಿಯನ್ನ ಮಾಡಿದೆ ಅಂತಾ ಸಿಎನ್​ಎನ್​ ನ್ಯೂಸ್ ವರದಿ ಮಾಡಿದೆ. ಶಿ ಜಿನ್‌ ಪಿಂಗ್ ನಿನ್ನೆ ಗುವಾಂಗ್‌ಡಾಂಗ್‌ನಲ್ಲಿರುವ ಮಿಲಿಟರಿ ನೆಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮ್ಮ ಸೈನಿಕರಿಗೆ ನಿಮ್ಮ ಮನಸ್ಸು ಮತ್ತು ಶಕ್ತಿಯನ್ನ ಯುದ್ಧಕ್ಕೆ ಸಿದ್ಧಪಡಿಸಿಕೊಳ್ಳಿ. ಜೊತೆಗೆ ಹೈ-ಅಲರ್ಟ್​ ಆಗಿರಿ. ನಮ್ಮ ಸೈನಿಕರು ಸಂಪೂರ್ಣ ನಿಷ್ಠಾವಂತ, ಸಂಪೂರ್ಣವಾಗಿ ಶುದ್ಧ ಮತ್ತು ಸಂಪೂರ್ಣವಾಗಿ ವಿಶ್ವಾಸಾರ್ಹರು. ನಾವು ಯಾವಾಗ ಬೇಕಾದರೂ ಯುದ್ಧಕ್ಕೆ ಸೂಚನೆ ನೀಡಬಹುದು, ಸಿದ್ಧರಿರಿ ಎಂದಿದ್ದಾರೆ ಅಂತಾ ವರದಿಯಾಗಿದೆ.

- Advertisement -

Related news

error: Content is protected !!