Saturday, May 18, 2024
spot_imgspot_img
spot_imgspot_img

ಡ್ರ್ಯಾಗನ್ ದೇಶದ ಮುಖವಾಡ ಕಳಚಿದ ದೊಡ್ಡಣ್ಣ..! ನಿಯಂತ್ರಣ ರೇಖೆ ಬಳಿ ಗ್ರಾಮ ನಿರ್ಮಿಸಿ ನರಿ ಬುದ್ದಿ ತೋರಿಸಿದ ಚೀನಾ

- Advertisement -G L Acharya panikkar
- Advertisement -

ಪದೇ ಪದೇ ಭಾರತವನ್ನು ಕೆಣಕುವ ಡ್ರ್ಯಾಗನ್ ದೇಶ ಚೀನಾದ ಕುತಂತ್ರದ ಮುಖವಾಡ ಮತ್ತೆ ಕಳಚಿದೆ. ಟಿಬೆಟ್ ಸ್ವಾಯತ್ತ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ನಡುವಣ ವಿವಾದಿತ ಪ್ರದೇಶದಲ್ಲಿ ಚೀನಾವು 100 ಮನೆಗಳನ್ನು ಒಳಗೊಂಡ ಗ್ರಾಮ ನಿರ್ಮಾಣ ಮಾಡಿದ್ದು ಭಾರತದ ಆತಂಕಕ್ಕೆ ಕಾರಣವಾಗಿದೆ. ಚೀನಾ ಇದನ್ನು ಅಲ್ಲಗೆಳೆದರೂ ವಿಶ್ವದ ದೊಡ್ಡಣ್ಣ ಅಮೆರಿಕಾ ತನ್ನ ರಕ್ಷಣಾ ಇಲಾಖೆಯ ವಾರ್ಷಿಕ ವರದಿಯನ್ನು ಚೀನಾದ ನರಿ ಬುದ್ದಿಯನ್ನು ಬಹಿರಂಗಗೊಳಿಸಿದೆ. ಇದಕ್ಕೆ ಪ್ರತಿರೋಧವಾಗಿ ಚೀನಾ, ಭಾರತದ ಜತೆಗಿನ ಬಾಂಧವ್ಯದ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಡಿ ಎಂದು ವಾರ್ನ್ ಮಾಡಿದೆ..!

ಚೀನಾದ ಸೇನಾ ಮತ್ತು ಭದ್ರತೆಗೆ ಸಂಬಂಧಿಸಿದ ಅಭಿವೃದ್ಧಿ ಕುರಿತ ವರದಿ ಇದಾಗಿದ್ದು ಚೀನಾದ ಈ ನಡೆ ಮತ್ತು ಗಡಿಯಲ್ಲಿ ಇತರ ಮೂಲಸೌಕರ್ಯ ಅಭಿವೃದ್ಧಿ ವಿಚಾರ ಭಾರತದ ಮಾಧ್ಯಮಗಳು ಹಾಗೂ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ. ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗಾಗಿ ಚೀನಾವು ಭಾರತವನ್ನು ದೂರಲು ಯತ್ನಿಸಿದೆ ಎಂದೂ ವರದಿ ಹೇಳಿದೆ.

ಎಲ್‌ಎಸಿ ಬಳಿ ಸೇನಾ ನಿಯೋಜನೆಗೆ ಭಾರತದ ಪ್ರಚೋದನೆಯೇ ಕಾರಣ ಎನ್ನುತ್ತಿರುವ ಚೀನಾ ಗಡಿ ಪ್ರದೇಶಗಳಲ್ಲಿ ಭಾರತವು ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸದ ಹೊರತು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ ಎಂದೂ ಹೇಳುತ್ತಿದೆ. ಭಾರತವು ಪ್ರತಿಪಾದಿಸುತ್ತಿರುವ ಗಡಿಯನ್ನು ಒಪ್ಪಿಕೊಳ್ಳಲು ಚೀನಾ ಸಿದ್ಧವಿಲ್ಲ ಎಂದು ಅಲ್ಲಿನ ಸರ್ಕಾರಿ ನಿಯಂತ್ರಿತ ಮಾಧ್ಯಮ ಹೇಳುತ್ತಿದೆ. ಗಡಿಯಲ್ಲಿ ಯೋಧರ ಮುಖಾಮುಖಿ ಸಂದರ್ಭದಲ್ಲಿ ಭಾರತವು ಅಮೆರಿಕದ ಜತೆಗೆ ಬಾಂಧವ್ಯ ವೃದ್ಧಿಸಿಕೊಳ್ಳುವುದೂ ಚೀನಾಕ್ಕೆ ಬೇಕಿರಲಿಲ್ಲ. ಭಾರತವು ಅಮೆರಿಕದ ನೀತಿಯನ್ನು ಗಡಿಯಲ್ಲಿ ಉಪಯೋಗಿಸುತ್ತಿದೆ ಎಂಬುದಾಗಿ ಚೀನಾ ಮಾಧ್ಯಮ ದೂರಿತ್ತು ಎಂದೂ ವರದಿ ಹೇಳಿದೆ.

- Advertisement -

Related news

error: Content is protected !!