Wednesday, April 24, 2024
spot_imgspot_img
spot_imgspot_img

ನನ್ನ ಹೃದಯಲ್ಲಿ ಮೋದಿ ಇದ್ದಾರೆ ಎದೆ ಬಗೆದು ತೋರಿಸುವೆ: -ಚಿರಾಗ್​ ಪಾಸ್ವಾನ್​

- Advertisement -G L Acharya panikkar
- Advertisement -

ಪಾಟ್ನಾ, ಬಿಹಾರ: ಬಿಹಾರ ವಿಧಾನಸಭೆ ಚುನಾವಣಾ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸೀಟು ಹಂಚಿಕೆ ವಿಚಾರವಾಗಿ ಉಂಟಾದ ಇರಿಸು ಮುರಿಸಿನಿಂದಾಗಿ ಎನ್​ಡಿಎ ಒಕ್ಕೂಟದಿಂದ ಹೊರಬಂದು ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿರುವ ಎಲ್​ಜೆಪಿ ಹಾಗೂ ಅದರ ಮುಖ್ಯಸ್ಥ ಚಿರಾಗ್​ ಪಾಸ್ವಾನ್ ಬಿಜೆಪಿ ನಾಯಕರ ಹೆಸರು ಬಳಸಿ ಪ್ರಚಾರ ಪಡೆಯುತ್ತಿದ್ದಾರೆ.ಜೊತೆಗೆ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಎಲ್​ಜೆಪಿ ಮುಖ್ಯಸ್ಥ ಚಿರಾಗ್​ ಪಾಸ್ವಾನ್ ತಿರುಗೇಟು ನೀಡಿದ್ದಾರೆ.​


ಪ್ರಧಾನಿ ಮೋದಿ ಅವರ ಭಾವಚಿತ್ರಗಳನ್ನು ಬಳಸಿಕೊಂಡು ಚುನಾವಣೆ ಪ್ರಚಾರ ಗಿಟ್ಟಿಸಿಕೊಳ್ಳುವ ಅಗತ್ಯತೆ ನನಗಿಲ್ಲ. ನಾನು ಮೋದಿ ಅವರಿಗೆ ಹನುಮಂತನಿದ್ದಂತೆ.. ಪ್ರಚಾರಕ್ಕೆ ಮೋದಿ ಅವರ ಭಾವಚಿತ್ರ ಬಳಸುವ ಅವಶ್ಯಕತೆ ನನಗಿಲ್ಲ. ಅವರ ಭಾವಚಿತ್ರ ಸದಾ ನನ್ನ ಎದೆಯೊಳಗಿರುತ್ತದೆ. ಅಗತ್ಯ ಸಮಯ ಬಂದರೆ ಎದೆ ಬಗೆದು ತೋರಿಸುವುದಕ್ಕೂ ನಾನು ಸಿದ್ಧ. ಪ್ರಧಾನಿಗಳ ಭಾವಚಿತ್ರದ ಅವಶ್ಯಕತೆ ಇರುವುದು ಸಿಎಂ ನಿತೀಶ್​​ ಕುಮಾರ್​ ಅವರಿಗೆ ಎನ್ನುವ ಮೂಲಕ ಬಿಜೆಪಿ ಹಾಗೂ ಜೆಡಿಯು ನಾಯಕರಿಗೆ ಚಿರಾಗ್​ ತಿರುಗೇಟು ನೀಡಿದ್ದಾರೆ.

- Advertisement -

Related news

error: Content is protected !!