- Advertisement -
- Advertisement -
ಕಿನ್ನಿಗೋಳಿ : ಕೃಷಿಕರೋರ್ವರ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಭಾನುವಾರ ಬೆಳಗ್ಗೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಎಲತ್ತೂರಿನಲ್ಲಿ ನಡೆದಿದೆ.
ಕಲ್ಕರೆ ನಿವಾಸಿ ಲಿಗೋರಿ ಪಿರೇರಾ (65) ಚಿರತೆ ದಾಳಿಗೆ ಒಳಗಾದ ಕೃಷಿಕ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಚಿರತೆ ಓಡಾಟದ ಬಗ್ಗೆ ಜನರು ಅಲರ್ಟ್ ಆಗಿದ್ದು, ಇಂದು ಬೆಳಿಗ್ಗೆ ಕಲ್ಕರೆ ನಿವಾಸಿ ಲಿಗೋರಿ ಎಂಬವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಬಂದಿರುವ ಲಿಗೋರಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ
ಎಳತ್ತೂರು ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಕೃಷಿಕರು ನೆಲೆಸಿದ್ದು ಇಂದು ಬೆಳಿಗ್ಗೆ ನಡೆದ ಚಿರತೆ ದಾಳಿ ಗ್ರಾಮಸ್ಥರನ್ನ ಭಯಭೀತರನ್ನಾಗಿಸಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
- Advertisement -