Monday, June 15, 2026
spot_imgspot_img
spot_imgspot_img

ಚಿತ್ರದುರ್ಗ: ಬೀದಿ ನಾಯಿಗಳ ಭೀಕರ ದಾಳಿಗೆ ಬಾಲಕ ಮೃತ್ಯು..!

- Advertisement -
- Advertisement -

ಚಿತ್ರದುರ್ಗ: ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಮಪುರ ಗ್ರಾಮದ ಕೊಂಡಾಪುರ ಎಂಬಲ್ಲಿ ನಡೆದಿದೆ.

ಕೊಂಡಾಪುರ ಬಳಿ ಟ್ಯೂಶನ್ ಗೆ ಹೋಗಿ ಬರುತ್ತಿದ್ದ ಸಿ.ಮಿಥುನ್ (11) ಮೇಲೆ ಬೀದಿನಾಯಿಗಳ ದಾಳಿ ನಡೆಸಿದ್ದು, ತಲೆ, ಎದೆ, ಕೈಕಾಲು ಸೇರಿ ಎಲ್ಲೆಡೆ ಕಚ್ಚಿ ಗಾಯಗೊಳಿಸಿದ್ದು, ಕೂಡಲೇ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಚಿಕಿತ್ಸೆ ಫಲಿಸದೆ ಮಾರ್ಗಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ. ಈ ಬಗ್ಗೆ ರಾಂಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!