Thursday, March 28, 2024
spot_imgspot_img
spot_imgspot_img

ಕುಖ್ಯಾತ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ 10 ವರ್ಷ ಜೈಲು!

- Advertisement -G L Acharya panikkar
- Advertisement -

ಮುಂಬೈ: ಕುಖ್ಯಾತ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿದೆ.

2013ರಲ್ಲಿ ಬುಕ್ಕಿ, ಬಿಲ್ಡರ್ ಅಜಯ್ ಗೋಸಾಲಿಯಾ ಕೊಲೆ ಪ್ರಯತ್ನದಲ್ಲಿ ಈ ಶಿಕ್ಷೆ ನೀಡಲಾಗಿದೆ. ಈ ಹತ್ಯೆ ಪ್ರಯತ್ನ ಪ್ರಕರಣದಲ್ಲಿ ಛೋಟಾ ರಾಜನ್ ಹಾಗೂ ಇತರೆ ಸಹ ಆರೋಪಿಗಳನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಇಂದು ತೀರ್ಪು ನೀಡಿದೆ.

52 ವರ್ಷದ ಅಜಯ್ ಗೋಸಾಲಿಯಾ ಅಲಿಯಾಸ್ ಗುಂಡ ಎಂಬ ಬಿಲ್ಡರ್ 2013ರ ಆಗಸ್ಟ್ 28ರಂದು ಮುಂಬೈನ ಮಲಾಡ್‌ನ ಪೂರ್ವಭಾಗ ಇನ್ಫಿನಿಟಿ ಮಾಲ್‌ನಿಂದ ಹೊರ ಬರುತ್ತಿದ್ದಾಗ ಮೂವರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು.

ಈ ದಾಳಿ ನಡೆಸಲು ತನ್ನ ನಂಬಿಕಸ್ಥ ಸಹಚರ ಸತೀಶ್ ಕಾಲಿಯಾಗೆ ಛೋಟಾ ರಾಜನ್ ಆದೇಶಿಸಿದ್ದ ಎಂದು ಸಿಬಿಐ ಆರೋಪಿಸಿತ್ತು.

- Advertisement -

Related news

error: Content is protected !!