Thursday, April 25, 2024
spot_imgspot_img
spot_imgspot_img

ಆಗಸ್ಟ್ 23 ರಿಂದ ಕಾಲೇಜ್​ಗಳು ಓಪನ್; ಹೊಸ ಮಾರ್ಗಸೂಚಿ ಬಿಡುಗಡೆ

- Advertisement -G L Acharya panikkar
- Advertisement -

ಬೆಂಗಳೂರು: ಪರ-ವಿರೋಧಗಳ ಮಧ್ಯೆಯೂ ಆ .23ರಿಂದ ಪ್ರಥಮ, ದ್ವಿತೀಯ ಪಿಯುಸಿ ಕಾಲೇಜು ಭೌತಿಕ ತರಗತಿಗಳು ಆರಂಭವಾಗುತ್ತಿವೆ. ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿದಂತೆ ಪಿಯುಸಿ ಇಲಾಖೆ ವತಿಯಿಂದ ಕೊರೊನಾ‌ ಮಾರ್ಗಸೂಚಿ ಬಿಡುಗಡೆಯಾಗಿದೆ.

ಪಿಯುಸಿ ಕೊರೊನಾ‌ ಮಾರ್ಗಸೂಚಿ ಪ್ರಮುಖ ಅಂಶಗಳು ಹೀಗಿವೆ..

  • ಪಾಸಿಟಿವಿಟಿ ಶೇ. 2ಕ್ಕಿಂತ ಕಡಿಮೆ ಇರುವ ಪ್ರದೇಶದಲ್ಲಿ ಕಾಲೇಜು ಆರಂಭ ಮಾಡಬೇಕು.
  • ವಾರದಲ್ಲಿ ಮೊದಲ ಮೂರು ದಿನ ಭೌತಿಕ ತರಗತಿಗಳು
  • ಸೋಮವಾರ, ಮಂಗಳವಾರ, ಬುಧವಾರ ಭೌತಿಕ ತರಗತಿಗಳು ನಡೆಯಬೇಕು
  • ತರಗತಿಗೆ ಹಾಜರಾಗದವರಿಗೆ ಅನ್‌ ಲೈನ್‌ ತರಗತಿ ನಡೆಸಬೇಕು.
  • ಆನ್ ಲೈನ್ ತರಗತಿ ಹಾಜರಾದವರಿಗೆ ಉಳಿದ ಮೂರು ದಿನದಲ್ಲಿ(ಗುರುವಾರ, ಶುಕ್ರವಾರ, ಶನಿವಾರ ತರಗತಿ) ಭೌತಿಕ ತರಗತಿ ಇರಲಿ
  • ಶೇ.50ರ ಅನುಪಾತದಲ್ಲಿ ಭೌತಿಕ ತರಗತಿಗಳು ನಡೆಯಬೇಕು.
  • ವಾರದಲ್ಲಿ ಪ್ರತ್ಯೇಕ ಎರಡು ಬ್ಯಾಚ್‌ನಲ್ಲಿ ಮೂರು ದಿನ ಭೌತಿಕ ತರಗತಿಗಳು ನಡೆಯಬೇಕು
  • ನೂರಕ್ಕಿಂತ ಕಡಿಮೆ‌ ಇರುವ ಕಾಲೇಜಿನಲ್ಲಿ ವಾರಪೂರ್ತಿ ಭೌತಿಕ ತರಗತಿ ನಡೆಸಲು ಅನುಮತಿ ಇದೆ.
  • ವಿಶಾಲವಾದ ಕೊಠಡಿಯಿರುವ ಕಾಲೇಜಿಗೆ ಅನುಮತಿ ನೀಡಲಾಗಿದೆ.
  • ವಿದ್ಯಾರ್ಥಿ ಹಾಜರಾತಿ ಸ್ಥಳೀಯ ಪರಿಸ್ಥಿತಿ ಅನುಗುಣವಾಗಿ ಕಡ್ಡಾಯಗೊಳಿಸುವುದು
  • ಕಾಲೇಜು ಆವರಣದಲ್ಲಿ ಗುಂಪು ಗೂಡುವಿಕೆ ಇರಬಾರದು, ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್‌ ಕಡ್ಡಾಯ
  • ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಬೇಕು
  • ಭೌತಿಕ ತರಗತಿ ಹಾಜರಾದವರಿಗೆ ಆನ್ ಲೈನ್ ತರಗತಿಯಲ್ಲಿ ಕೂರಲು ಅವಕಾಶ ನೀಡಬೇಕು
  • ಸಾಮೂಹಿಕ ಪ್ರಾರ್ಥನೆ, ಕ್ರೀಡೆ ಚಟುವಟಿಕೆ ವೇಳೆ ಕೊವಿಡ್ ನಿಯಮ ಪಾಲಿಸಬೇಕು
  • ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಕೊವಿಡ್ ಮಾರ್ಗಸೂಚಿ ಪಾಲಿಸಬೇಕು
  • ಪ್ರತಿದಿನ ಕಾಲೇಜಿನ ಕೊಠಡಿ, ಕಾರಿಡಾರು ಸ್ಯಾನಿಟೈಸ್ ಮಾಡಬೇಕು
  • ಕಾಲೇಜಿನಲ್ಲಿ ಸಂಗ್ರಹಿಸುವ ತ್ಯಾಜ್ಯ ಮೂರು ದಿನದೊಳಗೆ ವಿಲೇವಾರಿ ಮಾಡಬೇಕು
  • ಅನಾರೋಗ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಕೂಡಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ
  • ವಿದ್ಯಾರ್ಥಿಗಳು ತರಗತಿ & ಕಾಲೇಜು ಆವರಣದಲ್ಲಿ ಗುಂಪುಗೂಡಬಾರದು
  • ಕನಿಷ್ಠ 6 ಅಡಿಗಳ ಭೌತಿಕ ಅಂತರದ ನಿಯಮವನ್ನ ಪಾಲಿಸುವುದು
  • ಪದೇ ಪದೇ ಕೈಗಳನ್ನ ಸೋಪಿನಿಂದ ತೊಳೆಯಬೇಕು, ಸ್ಯಾನಿಟೈಸರ್ ಬಳಸಬೇಕು
  • ತರಗತಿ ಆರಂಭಕ್ಕೂ ಮುನ್ನ ಹೈಪೋ ಕ್ಲೋರೈಡ್​ದಿಂದ ಸ್ಯಾನಿಟೈಸ್ ಮಾಡಬೇಕು
  • ಕೋವಿಡ್ ಸೋಂಕು ಇಲ್ಲದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ
  • ಭೌತಿಕ ತರಗತಿ ಆಗದಿದ್ದರೆ, ಆನ್​​ಲೈನ್​​ನಲ್ಲಿ ವಿದ್ಯಾರ್ಥಿಗಳು ಹಾಜರಾಗಲು ಸೂಚನೆ
  • ಉಪನ್ಯಾಸಕರಿಗೆ, ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ
  • ಪ್ರಾರ್ಥನೆ, ಕ್ರೀಡೆ & ಎಲ್ಲಾ ಚಟುವಟಿಕೆಗಳನ್ನ ಕೋವಿಡ್ ನಿಯಾಮವಳಿಗಳಿಂದ ನಡೆಸುವುದು
  • ವಿದ್ಯಾರ್ಥಿಗಳಿಗೆ ಅವಶ್ಯವಿರುವ ಹೆಲ್ಪ್​​ಲೈನ್ ಹಾಗೂ ಆಸ್ಪತ್ರೆ ದೂರವಾಣಿ ನಂ. ಪ್ರಕಟಿಸುವುದು
  • ಕಾಲೇಜಿನ ಆವರಣದಲ್ಲಿ ಸ್ವಿಮ್ಮಿಂಗ್ ಪೂಲ್​​ ಬಳಸದೇ ಸಂಪೂರ್ಣ ಮುಚ್ಚಬೇಕು
  • 51 ವರ್ಷ ಮೇಲ್ಪಟ್ಟ ಉಪನ್ಯಾಸಕರಿಗೆ ಮಾಸ್ಕ್ ಜೊತೆಗೆ ಫೇಸ್​​ಗಾರ್ಡ್​ ಬಳಸಲು ಸೂಚನೆ
driving
- Advertisement -

Related news

error: Content is protected !!