Friday, April 19, 2024
spot_imgspot_img
spot_imgspot_img

ಕ್ಲಬ್​ ಹೌಸ್​ನಿಂದ ಬರೋಬ್ಬರಿ 38 ಲಕ್ಷ ಜನರ ಡೇಟಾ ಲೀಕ್; ಸಂಸ್ಥೆ ಹೇಳಿದ್ದೇನು?

- Advertisement -G L Acharya panikkar
- Advertisement -

ನವದೆಹಲಿ: ಇತ್ತೀಚೆಗೆ ಭಾರೀ ಜನಪ್ರಿಯವಾಗಿರುವ ಕ್ಲಬ್​​​ಹೌಸ್ ಆ್ಯಪ್​​ನಿಂದ ಲಕ್ಷಾಂತರ ಜನರ ಡೇಟಾ ಲೀಕ್​​ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಸೈಬರ್ ಭದ್ರತಾ ತಜ್ಞರೊಬ್ಬರ ಪ್ರಕಾರ ಸುಮಾರು 38 ಲಕ್ಷ ಬಳಕೆದಾರರ ಡೇಟಾ ಲೀಕ್​​ ಎಂದು ತಿಳಿದು ಬಂದಿದೆ. ಇನ್ನು, ಕೇವಲ ಕ್ಲಬ್​ಹೌಸ್ ಬಳಕೆದಾರರ ಡೇಟಾ ಮಾತ್ರವಲ್ಲ, ಜತೆಗೆ ಇವರ ಫೋನ್​​ನಲ್ಲಿರುವ ಎಲ್ಲಾ ಕಾಂಟಾಕ್ಟ್​ಗಳ ದತ್ತಾಂಶ ಲೀಕ್​​ ಆಗಿದೆ. ಈ ಡೇಟಾ ಡಾರ್ಕ್​ ವೆಬ್​ನಲ್ಲಿ ಮಾರಾಟವಾಗುತ್ತಿದೆ ಎಂದು ಆರೋಪಿಸಲಾಗಿದೆ.

ತನ್ನ ವಿರುದ್ಧ ಕೇಳಿ ಬಂದ ಆರೋಪವನ್ನು ಕ್ಲಬ್​ಹೌಸ್ ಸಂಪೂರ್ಣವಾಗಿ ತಳ್ಳಿ ಹಾಕಿದೆ. ನಮ್ಮ ಗ್ರಾಹಕರ ರಕ್ಷಣೆ ನಮಗೆ ಮೊದಲ ಆದ್ಯತೆ. ಗ್ರಾಹಕರಿಗೆ ಸಂಬಂಧಿಸಿದ ಯಾವುದೇ ರೀತಿಯ ಡೇಟಾ ನಾವು ಸೋರಿಕೆ ಮಾಡಿಲ್ಲ ಎಂದು ಸಂಸ್ಥೆ ತಿಳಿಸಿದೆ.

- Advertisement -

Related news

error: Content is protected !!