Tuesday, September 29, 2026
spot_imgspot_img
spot_imgspot_img

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ವಾಯುದಾಳಿಗೆ 49 ಮಂದಿ ಬಲಿ, 58 ಜನರಿಗೆ ಗಾಯ

- Advertisement -
- Advertisement -

ನೈಪಿಡಾವ್: ರಖೈನ್ ರಾಜ್ಯದ ಕ್ಯೌಕ್ತಾವ್ ಟೌನ್‌ಶಿಪ್‌ನಲ್ಲಿರುವ ಮಾರುಕಟ್ಟೆಯ ಸಮೀಪ ಮ್ಯಾನ್ಮಾರ್ ಮಿಲಿಟರಿ ನಡೆಸಿದ ವಾಯುದಾಳಿಯಲ್ಲಿ 49 ಜನರು ಸಾವನ್ನಪ್ಪಿದ್ದು, 58 ಜನರು ಗಾಯಗೊಂಡ ಘಟನೆ ನಡೆದಿದೆ.

ಮಾಹಿತಿ ಪ್ರಕಾರ, ಸೋಮವಾರ(ಸೆ.28) ಮಧ್ಯಾಹ್ನ ಸ್ಥಳೀಯ ಮಾರುಕಟ್ಟೆಯ ಬಳಿ ಫೈಟರ್ ಜೆಟ್ ಎರಡು ಬಾಂಬ್‌ಗಳನ್ನು ಸ್ಫೋಟಿಸಿದ್ದು, ಈ ದಾಳಿಯಲ್ಲಿ 49 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 58 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ 22 ಜನರ ಸ್ಥಿತಿ ಗಂಭೀರವಾಗಿದೆ ಎಂದು ರಖೈನ್‌ನ ಹಿರಿಯ ರಕ್ಷಣಾ ಅಧಿಕಾರಿಯಾದ ವಾಯ್ ಹುನ್ ಆಂಗ್ ಅವರು ತಿಳಿಸಿದ್ದಾರೆ.

ವಾಯದಾಳಿಯ ಕೆಲ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಹಾನಿಗೊಳಗಾದ ವಾಹನಗಳು, ಕಟ್ಟಡಗಳು ಕಂಡುಬಂದಿವೆ. ಈ ಘಟನೆಯ ಬಗ್ಗೆ ಮ್ಯಾನ್ಮಾರ್ ಮಿಲಿಟರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದರೆ ಮಿಲಿಟರಿಯು ಉದ್ದೇಶಪೂರ್ವಕವಾಗಿ ವಾಯುದಾಳಿಗಳನ್ನು ನಡೆಸಿದೆ ಎಂದು ಅರಾಕನ್ ಆರ್ಮಿ ಆರೋಪಿಸಿದೆ.

ಈ ಮಾರುಕಟ್ಟೆಯು ಈ ಪ್ರದೇಶದ ಮುಖ್ಯ ಸಗಟು ಕೇಂದ್ರವಾಗಿದ್ದು, ರಖೈನ್ ರಾಜ್ಯದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಮತ್ತು ಖರೀದಿದಾರರನ್ನು ಆಕರ್ಷಿಸುತ್ತದೆ. ಇದು ರಖೈನ್‌ನಲ್ಲಿ ನಡೆದ ಅತ್ಯಂತ ಗಂಭೀರ ವಾಯುದಾಳಿಗಳಲ್ಲಿ ಒಂದಾಗಿದೆ. ಈ ಟೌನ್‌ಶಿಪ್ ಅನ್ನು ದೇಶದ ಅತ್ಯಂತ ಶಕ್ತಿಶಾಲಿ ಜನಾಂಗೀಯ ಸಶಸ್ತ್ರ ಸಂಸ್ಥೆಗಳಲ್ಲಿ ಒಂದಾದ ಅರಾಕನ್ ಆರ್ಮಿ ನಿಯಂತ್ರಿಸುತ್ತದೆ ಎಂದು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!