Saturday, July 25, 2026
spot_imgspot_img
spot_imgspot_img

ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿಯಲ್ಲಿ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರತಿಭೋತ್ಸವ

- Advertisement -
- Advertisement -

ನೆಲ್ಯಾಡಿ: ಮೇ 27 ಬುಧವಾರ ದಂದು ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ ವಾರ್ಷಿಕೋತ್ಸವದ ಸಂಭ್ರಮಾಚರಣೆಯು ಸಂತ ಜಾರ್ಜ್ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.

ಬೆಳಗ್ಗೆ 10.30 ಕ್ಕೆ ಸರಿಯಾಗಿ ಬೆಳಗಿನ ಸಭಾ ಕಾರ್ಯಕ್ರಮ ವಿ. ವಿ‌. ಕಾಲೇಜು ನೆಲ್ಯಾಡಿಯ ಸಂಯೋಜಕರಾದ ಡಾ. ಸುರೇಶ್ ಅಧ್ಯಕ್ಷತೆಯಲ್ಲಿ ಆರಂಭವಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿ ಕಾಲೇಜು ಮ್ಯಾಗ್ಜೀನ್ ‘ತಳಿರು’ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಅಬ್ರಹಾಂ ವರ್ಗೀಸ್, ಸ್ಥಾಪಕ ಕಾರ್ಯದರ್ಶಿಗಳು, ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿಯವರು, ‘ವಿದ್ಯಾರ್ಥಿಗಳು ಸ್ಪಷ್ಟ ಉದ್ದೇಶ ಗುರಿಗಳೊಂದಿಗೆ ಛಲ ಬಿಡದೆ ಪ್ರಯತ್ನ ಪಡಬೇಕು. ಸಾಹಿತ್ಯ, ವೈಚಾರಿಕ ಕೃತಿಗಳನ್ನು ಓದಬೇಕು. ಪ್ರೀತಿ ಸೌಹಾರ್ದದತೆಯೊಂದಿಗೆ ಉತ್ತಮ ಗುರಿಯನ್ನು ತಲುಪುವುದರೊಂದಿಗೆ ಸೂಕ್ತ ಜೀವನವನ್ನು ಕಟ್ಟಿಕೊಳ್ಳಬೇಕು’ ಎಂದು ಹಾರೈಸಿದರೊಂದಿಗೆ ತಮ್ಮ ಕಾಲೇಜು ಆರಂಭಗೊಂಡ ಕಷ್ಟಕರ ದಿನಗಳನ್ನು ಮೆಲುಕು ಹಾಕಿದರು.

ಕಾಲೇಜು ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್, ಕಾಲೇಜಿನ ಶೈಕ್ಷಣಿಕ ಸಾಧನೆಯನ್ನು ಹೊಗಳಿ ಕಾಲೇಜಿನ ಉಳಿವಿನ ಅಗತ್ಯತೆಯ ಕುರಿತು ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಂಸ್ಕೃತಿಕ ಸಾಧನೆಗಾಗಿ ಅಭಿನಂದಿಸಿದರು. ಪಿ ಪಿ ವರ್ಗೀಸ್ , ಗೌರವ ಸಲಹೆಗಾರರು ಅನುಷ್ಠಾನ ಸಮಿತಿ ನೆಲ್ಯಾಡಿ ಅತಿಥಿಯಾಗಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ , ಕಾಲೇಜಿನ ಸಾಧನೆಯನ್ನು ಉಲ್ಲೇಖಿಸುತ್ತಾ, ಭವಿಷ್ಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಮುಂದುವರಿಯಬೇಕು, ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸುತ್ತೇವೆ ಎಂದರು. ಶ್ರೀ ವಿಶ್ವನಾಥ ಶೆಟ್ಟಿ, ಪ್ರಾಂಶುಪಾಲರು ಪದವಿಪೂರ್ವ ಕಾಲೇಜು ಕೊಕ್ಕಡ ಮಾತಾಡಿ, ಸರ್ಕಾರಿ ಕಾಲೇಜನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಒಂದೊಳ್ಳೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಸರ್ಕಾರಿ ಸಂಸ್ಥೆಗಳ ಮಹತ್ವ ತಿಳಿಸುವುದುರೊಂದಿಗೆ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಇನ್ನೋರ್ವ ಅತಿಥಿ, ಏಲಿಯಾಸ್ ಎಂ. ಕೆ. ಪ್ರಾಂಶುಪಾಲರು, ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಶೈಕ್ಷಣಿಕ ಸಾಧನೆಗಳಿಗೆ ಅಭಿನಂದಿಸಿ ಶುಭ ಹಾರೈಸಿದರು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉಮ್ಮರ್ ಬೈಲಂಗಡಿ, ಸರ್ಕಾರಿ ಕಾಲೇಜಿನ ಉಳಿವು ಕುರಿತು ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳಿಗಾಗಿ ಅಭಿನಂದಿಸಿ ಶುಭ ಹಾರೈಸಿದರು.ಅನುಷ್ಠಾನ ಸಮಿತಿಯ ಗೌರವ ಸಲಹೆಗಾರರು ಆದ ಶ್ರೀ ಸರ್ವೋತ್ತಮ ಗೌಡ, ಖಜಾಂಜಿ ಆದ ಶ್ರೀ ವಿಶ್ವನಾಥ್ ಶೆಟ್ಟಿ, ಅನುಷ್ಠಾನ ಸಮಿತಿಯ ಸದಸ್ಯರಾದ ಶ್ರೀ ಸತೀಶ್ ದುರ್ಗಾಶ್ರೀ, ಶಿಕ್ಷಕರ ರಕ್ಷಕ ಸಂಘದ ಸದಸ್ಯರಾದ ಶ್ರೀಮತಿ ಸೇಸಮ್ಮ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಪಲಕ ಹಾಗೂ ಪ್ರಶಸ್ತಿ ಪತ್ರದೊಂದಿಗೆ ಅಭಿನಂದಿಸಲಾಯಿತು. ಡಾ. ಸೀತಾರಾಮ ಪಿ ಸರ್ವರನ್ನು ಸ್ವಾಗತಿಸಿದರು. ಡಾ.ಆನಂದ ಎಮ್ ಅವರು ಕಾಲೇಜು ಚಟುವಟಿಗಳ ವಾರ್ಷಿಕ ವರದಿಯನ್ನು ಮಂಡಿಸಿದರು, ಶ್ರೀಮತಿ ಪಾವನಾ ರೈ ವಂದಿಸಿದರು ಹಾಗೂ ಶ್ರೀಮತಿ ಶ್ರುತಿ ಮತ್ತು ಶ್ರೀಮತಿ ವೆರೋನಿಕಾ ಪ್ರಭಾ ವಿ ಪಿ ಕಾರ್ಯಕ್ರಮವನ್ನು ನಿರೂಪಿಸಿದರು.

ಮಧ್ಯಾಹ್ನ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ವಿದ್ಯಾರ್ಥಿಗಳು, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಅನುಷ್ಠಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

- Advertisement -

Related news

error: Content is protected !!