Saturday, August 8, 2026
spot_imgspot_img
spot_imgspot_img

ಉಪ್ಪಿನಂಗಡಿ: ಕಾಲೇಜ್‌ ವಿದ್ಯಾರ್ಥಿ ನಾಪತ್ತೆ

- Advertisement -
- Advertisement -

ಉಪ್ಪಿನಂಗಡಿ: ಕಾಲೇಜ್‌ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಪತ್ತೆಯಾದ ವಿದ್ಯಾರ್ಥಿಯನ್ನು ಹತ್ಯಡ್ಕ ಗ್ರಾಮದ ನಿವಾಸಿ ಎಂ ವಿಜಯಚಂದ್ರ ಎಂಬವರ ಮಗ ತೀರ್ಥೇಶ ಎಂ ಎಂದು ಗುರುತಿಸಲಾಗಿದೆ.

ನೆಲ್ಯಾಡಿಯ ಕಾಲೇಜೊಂದರ ಪ್ರಥಮ ಬಿ ಎ ವಿದ್ಯಾರ್ಥಿಯಾಗಿರುವ ತೀರ್ಥೇಶ ಸೆ.21ರ ಶನಿವಾರದಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರದಂದು ಮುಂಜಾನೆ ಮನೆಯಿಂದ ಕಾಲೇಜಿಗೆಂದು ಹೊರಟ ತೀರ್ಥೇಶ ಕಾಲೇಜಿನಲ್ಲಿ ವಾಲಿಬಾಲ್ ಪಂದ್ಯಾಟವಿದೆ ಎಂಬ ಕಾರಣ ನೀಡಿ ಬಟ್ಟೆ ಬರೆಗಳನ್ನು ಕೊಂಡೊಯ್ದಿದ್ದನೆಂದೂ, ಶನಿವಾರ ಸಾಯಂಕಾಲ ನೆಲ್ಯಾಡಿ ಪೇಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದುದ್ದನ್ನು ಸಹಪಾಠಿಗಳು ಕಂಡಿರುವುದಾಗಿಯೂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!