


ವಿಟ್ಲ: ಕಾರು ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಇಡ್ಕಿದು ಗ್ರಾಮದ ಮಿತ್ತೂರು ಕುವೆತ್ತಿಲ್ ಎಂಬಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ಬೈಕ್ ಸವಾರ ತುಶಾಂತ್ ಶೆಟ್ಟಿ ಎಂದು ಗುರುತಿಸಲಾಗಿದೆ.
ದಿನಾಂಕ: 25-01-2024 ರಂದು ಬೆಳಿಗ್ಗೆ ತುಶಾಂತ್ ಶೆಟ್ಟಿ ಸಹಸವಾರೆ ಸುಮನ ಡಿ ರವರನ್ನು ಪುತ್ತೂರು ಕಾಲೇಜಿಗೆ ಕರೆದುಕೊಂಡು ಹೋಗುವಾಗ KA-19-MC-0810ನೇ ಕಾರನ್ನು ಅದರ ಚಾಲಕಿ ಶ್ರೀನಿತ್ಯರವರು ಅಜಾಗರೂಕತೆ ಹಾಗೂ ದುಡುಕುತನದಿಂದ ಚಾಲನೆ ಮಾಡಿಕೊಂಡು ಬಂದು ಕಾರಿನ ಬಲಭಾಗದಿಂದ ಬೈಕ್‌ಗೆ ಅಪಘಾತಪಡಿಸಿದ ಪರಿಣಾಮ ಬೈಕ್ ತುಶಾಂತ್ ಶೆಟ್ಟಿ ಹಾಗೂ ಸಹಸವಾರೆ ಡಾಮಾರು ರಸ್ತೆಗೆ ಬಿದ್ದು ಗಂಭೀರ ಗಾಯವಾಗಿರುತ್ತದೆ. ಸಹಸವಾರೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು. ತುಶಾಂತ್ ಶೆಟ್ಟಿರವರು ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 13/2024 ಕಲಂ: 279,337 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








