Sunday, August 23, 2026
spot_imgspot_img
spot_imgspot_img

ಜೀಪ್ ಬೈಕ್ ನಡುವೆ ಡಿಕ್ಕಿ; ಇಬ್ಬರು ಮೃತ್ಯು..!

- Advertisement -
- Advertisement -

ಜೀಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗರಲಗುಂಜಿ ಗ್ರಾಮದ ಬಳಿ ನಡೆದಿದೆ.

ಮೃತಪಟ್ಟವರನ್ನು ರಾಮಲಿಂಗ ಮುತ್ಗೇಕರ್(20), ಹನುಮಂತ ಪಾಟೀಲ್(20) ಎಂದು ಗುರುತಿಸಲಾಗಿದೆ.

ರಾಮಲಿಂಗ ಮುತ್ಗೇಕರ್, ಹನುಮಂತ ಪಾಟೀಲ್ ಬೇಕ್ವಾಡ ಗ್ರಾಮದ ನಿವಾಸಿಗಳು. ಇಬ್ಬರೂ ನಂದಿಹಾಳ ಗ್ರಾಮಕ್ಕೆ ಸೈನಿಕ ತರಬೇತಿ ಶಾಲೆಗೆ ಹೋಗುತ್ತಿದ್ದರು. ಸೈನಿಕನಾಗೋ ಕನಸು ಕಂಡಿದ್ದವರು ಭೀಕರ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

- Advertisement -

Related news

error: Content is protected !!