- Advertisement -
- Advertisement -


ವಿಟ್ಲ ಸರ್ಕಾರಿ ಪ್ರೌಢ ಶಾಲೆಯಲ್ಲಿ (ಆರ್‌ಎಂಎಸ್‌ಎ) 2024-25 ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ನಡೆಯಿತು. ಎರಡು ತಿಂಗಳ ರಜೆಯ ಬಳಿಕ ಪುಸ್ತಕ ಬ್ಯಾಗ್ ಜೊತೆಗೆ ಮತ್ತೆ ಶಾಲೆಯತ್ತ ಆಗಮಿಸಿದ ಮಕ್ಕಳಿಗೆ ಶಿಕ್ಷಕರೆಲ್ಲರೂ ಬಣ್ಣ ಬಣ್ಣದ ಬೆಲೂನ್ ನೀಡುವ ಮೂಲಕ ಶಾಲೆಗೆ ಸ್ವಾಗತಿಸಿದರು. ಬಳಿಕ ದೀಪ ಪ್ರಜ್ವಲನೆಯ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.

ಶಾಲಾ ಗೌರವಾಧ್ಯಕ್ಷ ಸುಬ್ರಾಯ ಪೈ, ಎಸ್ ಡಿ ಎಂ ಸಿ ಅಧ್ಯಕ್ಷರುಗಳಾದ ರವಿಶಂಕರ್ ಶಾಸ್ತ್ರಿ ಮತ್ತು ಶಾರದಾ, ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಮತ್ತು ಫೆಲ್ಸಿಟಾ ಈವಾ ಗಲ್ಬಾವೊ, ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಶಿಕ್ಷಕರು ಉಪಸ್ಥಿತರಿದ್ದು, ಎಲ್ಲಾ ಮಕ್ಕಳಿಗೂ ಶುಭಹಾರೈಸಿದರು.
- Advertisement -