Friday, July 24, 2026
spot_imgspot_img
spot_imgspot_img

ವಿಟ್ಲ: 17 ನೇ ವರ್ಷದ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ವಿದ್ಯಾ ಗೋಪಾಲ ಹವನ ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿ

- Advertisement -
- Advertisement -

ವಿಟ್ಲ: ವಿಶ್ವ ಹಿಂದೂ ಪರಿಷದ್‌ ಷಷ್ಠಿ ಪೂರ್ತಿ ಆಚರಣಾ ಸಮಿತಿ ವಿಟ್ಲ ಪ್ರಖಂಡ ಮತ್ತು ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಆಶ್ರಯದಲ್ಲಿ 17 ನೇ ವರ್ಷದ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ವಿದ್ಯಾ ಗೋಪಾಲ ಹವನ ಕಾರ್ಯಕ್ರಮ ಸೆ. 25 ನೇ ರವಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಪಂಚಲಿಂಗೇಶ್ವರ ಸದನದಲ್ಲಿ ನಡೆಯಲಿದೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ವಿಟ್ಲ ಪಂಚಮಿ ಹೊಟೇಲ್‌ ಸಂಕೀರ್ಣದಲ್ಲಿ ನಡೆಯಿತು.

ಪತ್ರಿಕಾ ಗೋಷ್ಠಿಯಲ್ಲಿ ವಿಟ್ಲ ಬಾಲಗೋಕುಲ ಸಮಿತಿಯ ಅಧ್ಯಕ್ಷರು ದೇವಿಪ್ರಸಾದ್‌ ಶೆಟ್ಟಿ ಬೆಂಞಣ್ತಿಮಾರ್‌ ಮಾತನಾಡಿ ’ವಿಶ್ವ ಹಿಂದೂ ಪರಿಷದ್‌ ಷಷ್ಠಿ ಪೂರ್ತಿ ಆಚರಣಾ ಸಮಿತಿ ವಿಟ್ಲ ಪ್ರಖಂಡ ಮತ್ತು ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಆಶ್ರಯದಲ್ಲಿ 17 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ವಿದ್ಯಾಗೋಪಾಲ ಹವನ ಕಾರ್ಯಕ್ರಮ ಸೆ 25 ನೇ ಆದಿತ್ಯವಾರ ಪಂಚಲಿಂಗೇಶ್ವರ ದೇವಸ್ಥಾನದ ಪಂಚಲಿಂಗೇಶ್ವರ ಸದನದಲ್ಲಿ ನಡೆಯಲಿದೆ. ಬೆಳಗ್ಗೆ ವೇದಮೂರ್ತಿ ಶ್ರೀ ಉದಯೇಶ ಕೆದಿಲಾಯರ ಪೌರೋಹಿತ್ಯದಲ್ಲಿ ಶ್ರೀ ವಿದ್ಯಾಗೋಪಾಲ ಹವನ ಸಂಕಲ್ಪದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಬಳಿಕ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಳಿಕ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಿಂದ ಶೋಭಾಯಾತ್ರೆ ಹೊರಡಲಿರುವುದು. ಶೋಭಾಯಾತ್ರೆಯನ್ನು ಸಾಮಾಜಿಕ ಕಾರ್ಯಕರ್ತರು ರಾಜೀವ ಭಂಡಾರಿ ಕುಂಡಕೋಳಿ ಉದ್ಘಾಟಿಸಲಿದ್ದಾರೆ. ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಶ್ರೀ ದಿವ್ಯ ಶಕ್ತಿ ಮಕ್ಕಳ ಕುಣಿತ ಭಜನೆ ತಂಡದಿಂದ ಕುಣಿತ ಭಜನೆ ಮೂಡಿಬರಲಿದೆ.

ಬಳಿಕ ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಧಾರ್ಮಿಕ ಸಭೆನಡೆಯಲಿದೆ. ಮನೋರಂಜನ್‌ ಕರೈ, ನಿರ್ದೇಶಕರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಿರಿಯ ಸ್ವಯಂಸೇವಕರು ತನಿಯಪ್ಪ ಮೂಲ್ಯ ಇವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ದೇವಿ ಪ್ರಸಾದ್‌ ಶೆಟ್ಟಿ ಪ್ರಧಾನ ಕಾರ್ಯದರ್ಶಿ ವಿ.ಹಿಂ.ಪ ಮಂಗಳೂರು ವಿಭಾಗ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಕೆ ಜಿ ವಿಟ್ಲ ಮುಡ್ನೂರು ಬೆಳೆ ವೈವಿಧ್ಯೀಕರಣ ಹಾಗೂ ನರ್ಸರಿ ವಿಭಾಗದಲ್ಲಿ ದ ಕ ಜಿಲ್ಲೆ ಶ್ರೇಷ್ಠ ಕೃಷಿ ಪ್ರಶಸ್ತಿ ವಿಜೇತರು, ಹಾಗೂ ಶುಭಾಶಂಸನ ಕು. ವಸುಧ ಉಪನ್ಯಾಸಕಿ ಭರತ ನಾಟ್ಯ ಹಾಗೂ ಯಕ್ಷಗಾನ ಕಲಾವಿದೆ ಬೋಳಂತೂರು ಇವರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಬಳಿಕ ಬಾಲಗೋಕುಲ ಮಕ್ಕಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಬಳಿಕ ರಾಜೇಶ್‌ ಮಳಿ ಮತ್ತು ತಂಡ ಮಂಗಳೂರು ಇವರಿಂದ ಅಪೂರ್ವ ಜಾದೂ ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಎಲ್ಲಾ ಹಿಂದೂ ಬಾಂಧವರು ಭಾಗವಹಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಕಂಠ ವರ್ಮ ಗೌರವಾಧ್ಯಕ್ಷರು, ಕಾರ್ಯದರ್ಶಿ ಶಿಶಿರ್‌ ಗೌಡ, ಪದ್ಮನಾಭ ಕಟ್ಟೆ ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಪ್ರಮುಖ್, ಉಪಾಧ್ಯಕ್ಷರು ಈಶ್ವರ್‌ ಡಿ ಕೂಜಪ್ಪಾಡಿ, ಜಗದೀಶ್‌ ಪಾಣೆಮಜಲು ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.

- Advertisement -

Related news

error: Content is protected !!