Sunday, May 5, 2024
spot_imgspot_img
spot_imgspot_img

Commonwealth Games 2022; ಮೂರು ಚಿನ್ನದೊಂದಿಗೆ 6 ಪದಕಕ್ಕೆ ಕೊರಳೊಡ್ಡಿದ ಭಾರತ..!

- Advertisement -G L Acharya panikkar
- Advertisement -

ಬರ್ಮಿಂಗ್‌ ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್‌ ನಲ್ಲಿ ಭಾರತಕ್ಕೆ ನಿನ್ನೆ ಶುಭ ಶುಕ್ರವಾರವಾಗಿದೆ. ಬರ್ಮಿಂಗ್‌ ಹ್ಯಾಮ್ ಕ್ರೀಡಾಂಗಣದಲ್ಲಿ ನಮ್ಮವರು ಭರ್ಜರಿ ಪದಕ ಬೇಟೆ ಮುಂದುವರಿಸಿದ್ದಾರೆ. ಬಜರಂಗ್ ಪುನಿಯ ಮತ್ತು ಸಾಕ್ಷಿ ಮಲಿಕ್ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಅಂಶು ಮಲಿಕ್ ಬೆಳ್ಳಿಗೆ ಕೊರಳೊಡ್ಡಿದರೆ, ಇನ್ನುಳಿದ ಇಬ್ಬರು ಕಂಚು ಗೆದ್ದು ಗೆಲುವಿನ ನಗೆ ಬೀರಿದರು. ಒಂದೇ ದಿನದಲ್ಲಿ 6 ಪದಕ ಬಾಚಿಕೊಳ್ಳುವ ಮೂಲಕ ಒಟ್ಟು 26 ಪದಕಗಳನ್ನು ಮುಡಿಗೇರಿಸಿಕೊಂಡಿದೆ ಭಾರತ. ಈ ಮೂಲಕದ ಐದನೇ ಸ್ಥಾನಕ್ಕೆ ಜಿಗಿದಿದೆ.

ಪುರುಷರ 65 ಕೆಜಿ ವಿಭಾಗದಲ್ಲಿ ಬಜರಂಗ್ ಪುನಿಯ ಸತತ 2ನೇ ಗೇಮ್ಸ್ ಬಂಗಾರಕ್ಕೆ ಮುತ್ತಿಟ್ಟರು. ಅಂತಿಮ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ ಇಂಗ್ಲೆಂಡ್‌ನ ಜಾರ್ಜ್‌ರ್ಯಾಮ್ ವಿರುದ್ಧ 10-0 ಅಂತರದ ಗೆಲುವು ಸಾಧಿಸಿದರು. ದೀಪಕ್ ಪುನಿಯ 86 ಕೆಜಿ ಅವರು ಮಣಿಸಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು.

ಪುರುಷರ 65 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಬಜರಂಗ್ ಪುನಿಯಾ
ಪುರುಷರ 86 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ದೀಪಕ್ ಪುನಿಯಾ

ವನಿತೆಯರ 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, ಕೆನಡಾದ ಅನಾ ಗೊಂಜಾಲೆಸ್ ಅವರನ್ನು ಮಣಿಸಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು.

ವನಿತೆಯರ 62 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಸಾಕ್ಷಿ ಮಲಿಕ್

ವನಿತೆಯರ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅಂಶು ಮಲಿಕ್ ನೈಜೀರಿಯಾದ ಒಡೊನಾಯೊ ಲಡೆಕ್ಯುರೋ ಯ್ ವಿರುದ್ಧ 4-8 ಅಂತರದಿಂದ ಸೋತು ಬೆಳ್ಳಿ ಪದಕ ಚುಂಬಿಸಿದರು.

ವನಿತೆಯರ 57 ಕೆಜಿ ವಿಭಾಗ ಅಂಶು ಮಲಿಕ್ ಬೆಳ್ಳಿ

ಸೆಮಿಫೈನಲ್‌ನಲ್ಲಿ ಪರಾಭವಗೊಂಡ ಮೋಹಿತ್ ಗ್ರೀವಾಲ್ (ಪುರುಷರ 125 ಕೆಜಿ) ಮತ್ತು ದಿವ್ಯಾ ಕಕ್ರಾನ್ (ವನಿತೆಯರ 68 ಕೆಜಿ) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಪುರುಷರ 125 ಕೆಜಿ ವಿಭಾಗದಲ್ಲಿ ಮೋಹಿತ್ ಗ್ರೀವಾಲ್‌ಗೆ ಕಂಚು
ವನಿತೆಯರ 68 ಕೆಜಿ ವಿಭಾಗದಲ್ಲಿ ದಿವ್ಯಾ ಕಕ್ರಾನ್ ಕಂಚು

ಕಾಮನ್ವೆಲ್ತ್ ಕುಸ್ತಿ ತ್ರಿವಳಿ ಬಂಗಾರ: ಒಂದೇ ದಿನ ಆರು ಪದಕ: ಮೂರು ಚಿನ್ನ, 1 ಬೆಳ್ಳಿ, ಎರಡು ಕಂಚು

ಪುರುಷರ 65 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಬಜರಂಗ್ ಪುನಿಯಾ
ವನಿತೆಯರ 62 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಸಾಕ್ಷಿ ಮಲಿಕ್
ಪುರುಷರ 86 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ದೀಪಕ್ ಪುನಿಯಾ
ವನಿತೆಯರ 57 ಕೆಜಿ ವಿಭಾಗ ಅಂಶು ಮಲಿಕ್ ಬೆಳ್ಳಿ
ವನಿತೆಯರ 68 ಕೆಜಿ ವಿಭಾಗದಲ್ಲಿ ದಿವ್ಯಾ ಕಕ್ರಾನ್ ಕಂಚು
ಪುರುಷರ 125 ಕೆಜಿ ವಿಭಾಗದಲ್ಲಿ ಮೋಹಿತ್ ಗ್ರೀವಾಲ್‌ಗೆ ಕಂಚು

- Advertisement -

Related news

error: Content is protected !!