Monday, April 29, 2024
spot_imgspot_img
spot_imgspot_img

ವಿಟ್ಲ: ಕೊವ್ಯಾಕ್ಸಿನ್ ಎರಡನೇ ಡೋಸ್ ಪಡೆಯಲು ಅಪಾರ ಜನಸ್ತೋಮ!

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಸರ್ಕಾರಿ ಶಾಲೆಯಲ್ಲಿ ಕೊವ್ಯಾಕ್ಸಿನ್ ಎರಡನೇ ಡೋಸ್ ನೀಡಲಾಗುತ್ತಿದ್ದು, ಈ ಕೋವ್ಯಾಕ್ಸಿನ್ ಪಡೆಯಲು ಅಪಾರ ಜನಸ್ತೋಮ ಗುಂಪು ಗುಂಪಾಗಿ ಬಂದಿದೆ.

ವಿಟ್ಲ ವ್ಯಾಪ್ತಿಯ ಜನರು ಈ ಹಿಂದೆ ಪ್ರಥಮ ಡೋಸ್ ಪಡೆದಿದ್ದು, ಎರಡನೇ ಡೋಸ್ ಗಾಗಿ ಕಳೆದ ಹಲವು ದಿನಗಳಿಂದ ಜನರು ಕಾಯುತ್ತಿದ್ದರು. ಸುಮಾರು 900 ರಷ್ಟು ಜನರಿಗೆ ಎರಡನೇ ಡೋಸ್ ಬಾಕಿಯಾಗಿತ್ತು. ಇದೀಗ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇಂದು 900 ವ್ಯಾಕ್ಸಿನ್ ಬಂದಿದೆ. ವಿಟ್ಲ ಸರ್ಕಾರಿ ಶಾಲೆಯಲ್ಲಿ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ನಿಂದಲೇ ನೂರಾರು ಜನರು ಆಗಮಿಸಿದ್ದು, ಜನರ ಗುಂಪುಗಳನ್ನು ಕಂಡು ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ವ್ಯಾಕ್ಸಿನ್ ಪಡೆಯಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿದರೆ ನೂಕುನುಗ್ಗಲು ಉಂಟಾಗಬಹುದೆಂದು ಶಾಲೆಯ ಶತಮಾನೋತ್ಸವದ ಕಟ್ಟಡದಲ್ಲಿ ವ್ಯವಸ್ಥೆ ಮಾಡಿದ್ದರೂ ಜನರ ಸಂದಣಿ ಹೆಚ್ಚಾಗಿ ಕಂಡು ಬಂದಿದೆ.

- Advertisement -

Related news

error: Content is protected !!