Tuesday, July 21, 2026
spot_imgspot_img
spot_imgspot_img

ಡಿಕೆಶಿ ಸಚಿವ ಸಂಪುಟದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್‍ ರೈ ಗೆ ಸ್ಥಾನ!

- Advertisement -
- Advertisement -

ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಕಾಂಗ್ರೆಸ್ ಮಾಸ್ಟರ್‍ ಪ್ಲಾನ್

ಈಗ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ಇದೆ, ರಾಹುಲ್ ಗಾಂಧಿ ಅವರ ಮಾತಿನ ಮೇರೆಗೆ ಮೊದಲೇ ಸಿದ್ದರಾಮಯ್ಯ ನುಡಿದಂತೆ, ಹೈಕಮಾಂಡ್ ಏನು ಹೇಳಿದೆ ಅದಕ್ಕೆ ನಾನು ಬದ್ಧ ಎನ್ನುವ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಇಂದು ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಡಿಕೆ ಶಿವಕುಮಾರ್‍ ಅವರು ಮುಂದಿನ ಮುಖ್ಯಮಂತ್ರಿ ಆಗುವ ಸಾಧ್ಯತೆ ಬಹುತೇಕ ಇದೆ.

ಈ ನಿಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಬಾರಿ ಕಸರತ್ತು ಲಾಭಿ ನಡೆಯುತ್ತಿದ್ದು, ಮೊದಲೇ ಡಿ.ಕೆ. ಶಿವಕುಮಾರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಅಪಾರ ಪ್ರೀತಿ ಇದ್ದು, ಕಾಂಗ್ರೆಸ್ ನ್ನು ಬಲಪಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರಿದ್ದು , ಯು.ಟಿ ಖಾದರ್‍ ಹಾಗೂ ಅಶೋಕ್ ಕುಮಾರ್‍ ರೈ , ಈಗಾಗಲೇ ಯು.ಟಿ ಖಾದರ್‍ ಗೆ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ನೀಡಿದ್ದು, ದಕ್ಷಿಣಕನ್ನಡ ಜಿಲ್ಲೆಯನ್ನು ಮತ್ತೊಮ್ಮೆ ಕಾಂಗ್ರೆಸ್ ಬಲವರ್ಧನೆಗೆ ಸಹಕಾರಿಯಾಗುವಂತೆ, ಅಶೋಕ್ ಕುಮಾರ್‍ ರೈ ಯವರು ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ಈ ನಿಟ್ಟಿನಲ್ಲಿ ಆಶೋಕ್ ಕುಮಾರ್‍ ರೈ ಅವರು ಸಚಿವರಾಗಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆ ಮಾಡುವ ಮಾಸ್ಟರ್‍ ಪ್ಲಾನ್ ಡಿಕೆಶಿಯವರದ್ದು ಎಂದು ಬಲ್ಲ ಮೂಲಗಳಿಂದ ಮಾಹಿತಿ ಇದೆ.

- Advertisement -

Related news

error: Content is protected !!