Monday, April 29, 2024
spot_imgspot_img
spot_imgspot_img

ಬಹುಪಯೋಗಿ ಕೊತ್ತಂಬರಿ ಸೊಪ್ಪು

- Advertisement -G L Acharya panikkar
- Advertisement -

ಮಾಂಸದ ಅಡುಗೆಗೆ ಆಗಲಿ, ಸಸ್ಯಹಾರಿ ಅಡುಗೆಗೆ ಆಗಲಿ ಕೊತ್ತಂಬರಿ ಸೊಪ್ಪು ಇರಲೇಬೇಕು. ಹಸಿರು ಬಣ್ಣದ ತಾಜಾ ಕೊತ್ತಂಬರಿ ಸೊಪ್ಪನ್ನು ಖಾದ್ಯ ತಯರಾದ ಕೊನೆಯಲ್ಲಿ, ಸಣ್ಣ ಸಣ್ಣದಾಗಿ ಕತ್ತರಿಸಿ ಡೆಕೋರೇಟ್‌ ಮಾಡಲಾಗುತ್ತದೆ. ಅಷ್ಟಕ್ಕೂ ಕೊತ್ತಂಬರಿ ಸೊಪ್ಪು, ಆಹಾರವನ್ನು ಶೃಂಗರಿಸುವ ಸಲುವಾಗಿ ಬಳಸಲಾಗುತ್ತದೆಯೇ? ಅಲ್ಲವೇ ಅಲ್ಲ….

ರಕ್ತದಲ್ಲಿರುವ ಸಕ್ಕರೆಯ ಮಟ್ಟ, ಯಕೃತ್ತಿನ ಮತ್ತು ಮೂತ್ರಪಿಂಡದ ಆರೋಗ್ಯವನ್ನು ರಕ್ಷಿಸುವ ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.

ಸ್ವಚ್ಛವಾಗಿ ತೊಳೆದ ತಾಜಾ ಕೊತ್ತಂಬರಿ ಕಟ್ಟನ್ನು ತೆಗೆದುಕೊಂಡು ಅದನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಶುದ್ಧ ನೀರಿನಲ್ಲಿ ಬಿಸಿ ಮಾಡಿ, ಹತ್ತು ನಿಮಿಷ ಕುದಿಸಿ ನಂತರ ಆರಿಸಿ. ಅದನ್ನು ಸೋಸಿ, ಸ್ವಚ್ಛವಾದ ಉತ್ತಮ ದರ್ಜೆಯ ಬಾಟಲಿ ಅಥವಾ ಪಾತ್ರೆಯಲ್ಲಿ ಶೇಖರಿಸಿಡಿ. ದಿನಂಪ್ರತಿ ಒಂದು ಲೋಟ ಈ ರೀತಿ ತಯಾರಿಸಿದ ಕೊತ್ತಂಬರಿ ಕಷಾಯವನ್ನು ರಾತ್ರಿ ಮಲಗುವ ಮುನ್ನ ಸೇವಿಸಿ. ನಿಮ್ಮ ಮೂತ್ರ ವಿಸರ್ಜನೆಯ ವೇಳೆಗೆ ದೇಹದಲ್ಲಿನ ಅನಪೇಕ್ಷಿತ ಲವಣಗಳು ಹಾಗೂ ಸಂಗ್ರಹಿತ ಅಶುದ್ಧಗಳು ಹೊರ ಹೋಗುತ್ತದೆ.

ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗುವುದರಿಂದ ಮಧುಮೇಹದ ಅಪಾಯವು ಕೂಡ ಹೆಚ್ಚಾಗುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿರುವ ಆಹಾರದ ಫೈಬರ್‌ಗಳು ಮತ್ತು ಪ್ರೋಟೀನ್‌ಗಳು ಗಮನಾರ್ಹವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

ಒಂದು ಲೋಟ ಕೊತ್ತಂಬರಿ ಸೊಪ್ಪಿನ ರಸಕ್ಕೆ ಜೇನುತುಪ್ಪವನ್ನು ಸೇರಿಸಿ ಕುಡಿಯಬಹುದು. ಇದು ನಿಮ್ಮ ಹಸಿವನ್ನು ನಿಯಂತ್ರಿಸುವ ಜೊತೆ ಜೊತೆಗೆ ತೂಕವನ್ನು ಕೂಡ ಕಡಿಮೆ ಮಾಡುತ್ತದೆ. ಮಧುಮೇಹ 2 ಗೆ ಉತ್ತಮವಾದ ಚಿಕಿತ್ಸೆ ನೀಡುತ್ತದೆ. ಕೊತ್ತಂಬರಿ ಸೊಪ್ಪನ್ನು ಜಗಿಯುತ್ತಿದ್ದರೆ ದಂತಕ್ಷಯ ನಿವಾರಣೆಯಾಗುತ್ತದೆ.

ಕೊತ್ತಂಬರಿ ಎಲೆಗಳು ಮೂಳೆ ಸಾಂದ್ರತೆಯನ್ನು ಬಲಪಡಿಸುವ ಶಕ್ತಿಯನ್ನು ಹೊಂದಿದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಮ್, ರಂಜಕ ಹೊಂದಿರುವುದರಿಂದ ಮೂಳೆಗಳನ್ನು ಬಲಿಷ್ಠಗೊಳಿಸಲು ಉತ್ತೇಜಿಸುತ್ತದೆ. ಯಾರೆಲ್ಲಾ ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್‌ ಸಮಸ್ಯೆಯನ್ನು ಹೊಂದಿರುತ್ತಿರೋ ಅವರೆಲ್ಲಾ ತಪ್ಪದೇ ಆಹಾರದಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಕೆ ಮಾಡಿ.

ಹಾಗೆಯೇ ಕೊತ್ತಂಬರಿ ಸೊಪ್ಪಿನಲ್ಲಿರುವ ಹೇರಳವಾದ ಆಲ್ಕಲಾಯ್ಡ್‌ಗಳು ಮತ್ತು ಫ್ಲೇವನಾಯ್ಡ್‌ಗಳು ಕಾಮಾಲೆ ಮತ್ತು ಪಿತ್ತದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ. ಯಕೃತ್ತಿನ ಕಾಯಿಲೆಗಳನ್ನು ಗುಣಪಡಿಸಲು ಮತ್ತು ಕಾರ್ಯವನ್ನು ಹೆಚ್ಚಿಸಲು ಉತ್ತೇಜಿಸುತ್ತದೆ.

- Advertisement -

Related news

error: Content is protected !!