ಮಂಗಳೂರು: ಕೊನೆಗೂ ನಡೆದ ಮೃತ ಕೊರೋನಾ ಸೋಂಕಿತನ ಅಂತ್ಯಕ್ರಿಯೆ,ಸ್ಥಳೀಯರ ಮನವೊಲಿಸಿ ಅಂತ್ಯಕ್ರಿಯೆ ನಡೆಸಿದ ಅಧಿಕಾರಿಗಳು.ಮಂಗಳೂರಿನ ಬೋಳಾರದಲ್ಲಿರುವ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.ಕೊರೋನಾದಿಂದ ಇಂದು ಸಾವನ್ನಪ್ಪಿದ್ದ ಸುರತ್ಕಲ್ ನ ಇಡ್ಯಾ ನಿವಾಸಿ , 31 ವರ್ಷದ ಯುವಕ ಕೊರೋನಾಗೆ ಬಲಿಯಾಗಿದ್ದ.ಸತತ 4 ಗಂಟೆಗಳ ಕಾಲ ಅಂಬುಲೆನ್ಸ್ ನಲ್ಲೇ ಇದ್ದ ಮೃತದೇಹವನ್ನು,ಅಂತ್ಯಕ್ರಿಯೆಗೆ ಸ್ಥಳೀಯರು ಒಪ್ಪದ ಕಾರಣ ಕಗ್ಗಂಟಾಗಿದ್ದ ಅಂತಿಮ ವಿಧಿವಿಧಾನ,ಸ್ಥಳೀಯರನ್ನು ಕಾಡಿಬೇಡಿ ಅಂತ್ಯಕ್ರಿಯೆ ಮಾಡಿದ ಅಧಿಕಾರಿಗಳು.ಸ್ಥಳೀಯರು ಹೊರತು ಪಡಿಸಿ ಹೊರಗಿನವರ ಅಂತ್ಯಕ್ರಿಯೆ ಮಾಡದಂತೆ ಸ್ಥಳೀಯರ ಎಚ್ಚರಿಕೆಯನ್ನು ನಿವಾಸಿಗಳು ನೀಡಿದ್ದಾರೆ.
ಇಡ್ಯಾದ ಮಸೀದಿಯ ಕಬರ್ ಗುಂಡಿಯಲ್ಲಿ ನೀರು ತುಂಬಿದ್ದ ಕಾರಣ ಅಲ್ಲಿ ಶವ ಸಂಸ್ಕಾರ ನಡೆಸಲು ಸಾಧ್ಯವಾಗಿಲ್ಲ, ಹೀಗಾಗಿ ಅಧಿಕಾರಿಗಳು ಬೋಳಾರ ಬಳಿಯ ಮಸೀದಿಯಲ್ಲಿ ಅಂತ್ಯಸಂಸ್ಕಾರ ಮುಂದಾದರು. ಆದರೆ ಇದಕ್ಕೆ ಬೋಳಾರ ಮಸೀದಿ ಬಳಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಪರಿಣಾಮ ಮಧ್ಯಾಹ್ನ 12ಗಂಟೆಯಿಂದಲೂ ಮೃತದೇಹವನ್ನು ಆ್ಯಂಬುಲೆನ್ಸ್ನಲ್ಲಿಯೇ ಇಡಲಾಗಿತ್ತು.ಇಡ್ಯಾ ಮಸೀದಿಯ ಮುಖಂಡರು ಸ್ಥಳೀಯರ ವಿರೋಧದ ನಡುವೆ ಬೋಳಾರ ಮಸೀದಿಯಲ್ಲಿ ಅಂತ್ಯಸಂಸ್ಕಾರ ಮಾಡುವುದು ಬೇಡ, ಯುವಕನ ಮೃತದೇಹವನ್ನು ಇಡ್ಯಾ ಮಸೀದಿಯಲ್ಲಿ ದಫನ್ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ಗಂಟೆಗಳ ಕಾಲ ಮೃತದೇಹವನ್ನು ದಫನ್ ಮಾಡಲು ಅಲೆದಾಡುತ್ತಿದ್ದ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.