Friday, March 29, 2024
spot_imgspot_img
spot_imgspot_img

ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ: ಮೂರನೇ ಅಲೆ ಆರಂಭ!

- Advertisement -G L Acharya panikkar
- Advertisement -

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಡೆಲ್ಟಾ ರೂಪಾಂತರಿ ವೈರಸ್‌ನ ಸೋಂಕು ವೇಗವಾಗಿ ಹರಡುತ್ತಿದ್ದು, ಕೊರೋನಾ ಪ್ರಕರಣಗಳು ದಿನದಿಂದ ದಿನ ಏರಿಕೆಯಾಗುತ್ತಿದೆ, ತಜ್ಞರಲ್ಲಿ ಆತಂಕ ಮೂಡಿಸಿದ್ದು, ಇದು ಕೊರೊನಾ ಮೂರನೇ ಅಲೆಯ ಆರಂಭ ಎಂದು ತಜ್ಞರು ತಿಳಿಸಿದ್ದಾರೆ.

ಪ್ರಸ್ತುತ ಭಾರತದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಕೇರಳದ ಪಾಲು ಶೇಕಡಾ 50ರಷ್ಟಿದೆ. ಮಾರ್ಚ್ 10ರಿಂದ ಆಗಸ್ಟ್ 10ರವರೆಗೆ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವಾಗಿದೆ ಎಂದು ಮಾಹಿತಿ ಇದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿಗೆ 585 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 4,30,254 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಟ್ಟು ಪ್ರಕರಣಗಳು: 3,21,17,826, ಒಟ್ಟು ಚೇತರಿಕೆಗಳು: 3,13,02,345, ಸಕ್ರಿಯ ಪ್ರಕರಣಗಳು: 3,85,227, ಸಾವಿನ ಸಂಖ್ಯೆ: 4,30,254.

driving
- Advertisement -

Related news

error: Content is protected !!