- Advertisement -
- Advertisement -
ಮಂಗಳೂರು :- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ ಶತಕದತ್ತ ಸಾಗಿದೆ. ಇಂದು ಮತ್ತೆ ಜಿಲ್ಲೆಯಲ್ಲಿ 7 ಮಂದಿ ಕೊರೋನಾ ದಿಂದ ಸೋಂಕಿಗೆ ಬಲಿಯಾಗಿದ್ದಾರೆ.ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 99 ಕ್ಕೇರಿಕೆ ಆಗಿದೆ.
ಇಂದು ದಾವಣಗೆರೆ ಮೂಲದ 36 ವರ್ಷದ ಯುವಕ,ಭಟ್ಕಳ ಮೂಲದ 69 ವರ್ಷದ ವೃದ್ಧ ,
ಕೇರಳದ ಪಾಲಕ್ಕಾಡ್ ನಿವಾಸಿ 52 ವರ್ಷದ ವ್ಯಕ್ತಿ, ಮಂಗಳೂರು ಮೂಲದ 53 ವರ್ಷದ ವ್ಯಕ್ತಿ.ಇನ್ನೋರ್ವ ನಗರದ 79 ವರ್ಷದ ವೃದ್ಧ ,ಹಾಗೂ ಮಂಗಳೂರು ಮೂಲದ 58 ವರ್ಷದ ಮಹಿಳೆ , ಬಂಟ್ವಾಳ ಮೂಲದ 52 ವರ್ಷದ ವ್ಯಕ್ತಿ ಕೊರೋನಾ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ.
ದಿನದಿಂದ ದಿನಕ್ಕೆ ದ.ಕ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಸಾವಿನ ಸಂಖ್ಯೆಯು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.ದಕ್ಷಿಣ ಕನ್ನಡದಲ್ಲಿ ಇಂದು ಬರೋಬ್ಬರಿ 218 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಕೇಸ್ ಸಂಖ್ಯೆ 4,214ಕ್ಕೇ ಏರಿಕೆಯಾಗಿದೆ.
- Advertisement -