Friday, April 26, 2024
spot_imgspot_img
spot_imgspot_img

ಸಾಮಾಜಿಕ ಅಂತರ ಕಾಪಾಡಲು ವಿಶೇಷ ಡ್ರೆಸ್ ತಯಾರಿಸಿದ ಡಿಸೈನರ್

- Advertisement -G L Acharya panikkar
- Advertisement -

ಕೊರೊನಾ ಬಂದ ಮೇಲೆ ಜನರ ಜೀವನ ಕ್ರಮದಲ್ಲಿ ಒಂದಿಷ್ಟು ಬದಲಾವಣೆಯಂತೂ ಖಂಡಿತಾ ಆಗಿದೆ. ಕಣ್ಣಿಗೆ ಕಾಣದ ರೋಗಾಣುವಿನಿಂದ ರಕ್ಷಿಸಿಕೊಳ್ಳಲು ಜನತೆ ಮಾಸ್ಕ್​, ಸಾಮಾಜಿಕ ಅಂತರ, ಸ್ಯಾನಿಟೈಸರ್​ ಬಳಕೆಯನ್ನು ಜೀವನದ ಭಾಗವನ್ನಾಗಿಸಿಕೊಂಡಿದ್ದಾರೆ. ಫ್ಯಾಶನ್​ ಹಾಗೂ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ಮಾಸ್ಕ್​ಗಳು ಮಾರುಕಟ್ಟೆಗೆ ಬಂದಿವೆ. ಆದ್ರೆ ಸೋಷಿಯಲ್​ ಡಿಸ್ಟೆಂನ್ಸ್​ಗೂ ಫ್ಯಾಶನೇಬಲ್​ ಆದ ವ್ಯವಸ್ಥೆ ಬಂದಿದೆ ಅಂದ್ರೆ ನೀವು ಖಂಡಿತಾ ನಂಬಲೇ ಬೇಕು.

ಶೈ ಎನ್ನುವ ಡಿಸೈನರ್​ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಉಡುಪೊಂದನ್ನು ತಯಾರಿಸಿದ್ದಾರೆ. ಕೊರೊನಾ ಹಿನ್ನೆಲೆ ಈ ಉಪಾಯ ಮಾಡಿದ್ದು, ಜನರಿಂದ ಎರಡೂ ಬದಿ 6 ಅಡಿ ಸೇರಿ ಒಟ್ಟಾರೆ 12 ಅಡಿ ಅಂತರ ಕಾಯ್ದುಕೊಳ್ಳುವಂತಹ ಚೆಂದದ ಗೌನ್ ತಯಾರಿಸಿದ್ದಾರೆ. ಈ ಪ್ರಯತ್ನದಲ್ಲಿ ಎರಡು ಬಾರಿ ಸೋಲು ಕಂಡ ಶೈ ಕೊನೆಗೂ ಈ ಡ್ರೆಸ್​ ತಯಾರಿಸಿದ್ದಾರೆ.

- Advertisement -

Related news

error: Content is protected !!