- Advertisement -
- Advertisement -
ನವದೆಹಲಿ: ಪಿಎಂ ಕೇರ್ಸ್ ನಿಧಿಯ ಹಣದಿಂದ 1 ಲಕ್ಷ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ಅನುಮತಿ ನೀಡಿದ್ದಾರೆ.

ಅಲ್ಲದೇ ಪಿಎಂ ಕೇರ್ಸ್ ಹಣದಿಂದ ಈ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಸಾಧ್ಯವಾದಷ್ಟು ಶೀಘ್ರವಾಗಿ ಖರೀದಿಸಬೇಕು ಮತ್ತು ಅವುಗಳನ್ನು ಹೆಚ್ಚು ಕೊರೊನಾ ಕೇಸ್ಗಳು ಕಂಡುಬರುತ್ತಿರುವ ರಾಜ್ಯಗಳಿಗೆ ನೀಡಬೇಕು ಎಂದು ಪ್ರಧಾನಿ ಮೋದಿ ಆದೇಶಿಸಿದ್ದಾರೆ.

ಅತಿಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವ ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ರಾಜ್ಯಗಳಿಗೆ ಈ ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಲಭ್ಯವಾಗುವ ಸಾಧ್ಯತೆಗಳಿವೆ.

- Advertisement -








