Tuesday, September 10, 2024
spot_imgspot_img
spot_imgspot_img

ಕ್ವಾರಂಟೈನ್ ನಿಯಮ ಉಲ್ಲಂಘನೆ: ವಿಟ್ಲ, ಬಂಟ್ವಾಳ ಠಾಣೆಗಳು ಸೇರಿದಂತೆ ಜಿಲ್ಲೆಯಾದ್ಯಂತ 51 ಪ್ರಕರಣ ದಾಖಲು

- Advertisement -G L Acharya panikkar
- Advertisement -

ಬಂಟ್ವಾಳ: ಕೋವಿಡ್19 ದ.ಕ.ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿರುವ ನಿಯಮ ಉಲ್ಲಂಘನೆ ಮಾಡಿ ತಿರುಗಾಟ ನಡೆಸಿದ ಬಗ್ಗೆ ವರದಿಯಾಗಿದ್ದು ಇವರ ಮೇಲೆ ಪ್ರಕರಣ ದಾಖಲಾಗಿದೆ.
ದ.ಕ.ಜಿಲ್ಲೆಯ ಲ್ಲಿ ಒಟ್ಟು ವಿವಿಧ ಠಾಣೆಯ ವ್ಯಾಪ್ತಿಯಲ್ಲಿ 51 ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲು ಜಿಲ್ಲಾಡಳಿತ ಅಯಾಯ ಪೋಲೀಸ್ ಠಾಣೆಗಳಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮೂಲಕ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕೋವಿಡ್19 ವಾರ್ ರೂಂ ಬೆಂಗಳೂರು ಅವರು ವಿಡಿಯೋ ಸಂವಾದದ ಲ್ಲಿ ನೀಡಿರುವ ನಿರ್ದೇಶನ ದಂತೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಕ್ವಾರಂಟೈನ್ ನಲ್ಲಿರುವ ನಿಯಮ ಉಲ್ಲಂಘನೆ ಮಾಡಿ ಹೊರಗಡೆ ಹೋಗಿ ತಿರುಗಾಟ ನಡೆಸಿರುವ ಬಗ್ಗೆ
ಸೆಟ್ ಲೈಟ್ ಮುಖಾಂತರ ಪ್ರಕರಣ ಪತ್ತೆ ಹಚ್ಚಿ ದ ಇಲಾಖೆ ಒಟ್ಟು ಜಿಲ್ಲೆಯ ಲ್ಲಿ 51 ಪ್ರಕರಣ ದಾಖಲಿಸಿದೆ.
ಕೋವಿಡ್ 19 ಗೆ ಸಂಬಂಧಿಸಿದಂತೆ ಕ್ವಾರಂಟೈನ್ ಗೆ ಮಾಡಲಾಗುತ್ತಿದ್ದ ವ್ಯಕ್ತಿಗಳಿಗೆ ಎಷ್ಟು ಹೇಳಿದರೂ ಅವರು ನಿಯಮ ಉಲ್ಲಂಘನೆ ಮಾಡುತ್ತಿರುವುದು ಹೆಚ್ಚು ಹೆಚ್ಚು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮತ್ತು ಜಿಲ್ಲೆಯ ಲ್ಲಿ ಪಾಸಿಟಿವ್ ಪ್ರಕರಣಗಳು ಮಿತಿಮೀರಿಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಗಂಭೀರ ವಾಗಿ ಪರಿಗಣಿಸಿ ಪ್ರಕರಣ ದಾಖಲಿಸಲು ಅದೇಶ ಮಾಡಿದ್ದಾರೆ.
269, 270,271 ಐಪಿಸಿ, ಹಾಗೂ ಕರ್ನಾಟಕ ಎಪಿಡಮಿಕ್ ಆಕ್ಟ್ 5(1) ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಲ್ಲಿ 5 ಪ್ರಕರಣಗಳು ದಾಖಲಾದರೆ , ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ 1
ವಿಟ್ಲ ಠಾಣೆಯಲ್ಲಿ 1ಹಾಗೂ
ಪುಂಜಾಲಕಟ್ಟೆ
ಸೇರಿದಂತೆ ಉಳಿದ ಠಾಣಾ ವ್ಯಾಪ್ತಿಯ ಲ್ಲಿ ಪ್ರಕರಣ ದಾಖಲಿಸಲಾಗಿದೆ.


ಇವರು ಇನ್ಸ್ಟಿಟ್ಯೂಟ್ ನಲ್ ಕ್ವಾರಂಟೈನ್ ಮುಗಿಸಿ ಹೋಂ ಕ್ವಾರಂಟೈನ್ ಗೆಂದು ಕಳುಹಿಸಿಕೊಟ್ಟ ವ್ಯಕ್ತಿಗಳು ಚಾಲಕೀತನ ಪ್ರದರ್ಶನ ಮಾಡಿ ಮನೆಯಿಂದ ಸುತ್ತಾಟ ನಡೆಸಿದ್ದು ಇಲಾಖೆಗೆ ಜಿ.ಪಿ.ಆರ್.ಎಸ್.ಮೂಲಕ ತಿಳಿದುಬಂದಿದೆ.
ಕೋವಿಡ್ 19 ನ ಅವಧಿಯಲ್ಲಿಹೋಂ ಕ್ವಾರಂಟೈನ್ ನಲ್ಲಿರಬೇಕಾದವರು ನಿಯಮ ಉಲ್ಲಂಘಿಸಿ ತಿರುಗಾಟ ನಡೆಸಿದ್ದರಿಂದ ಕೊರೊನಾ ಹಬ್ಬಲು ಇವರ ಕಾರಣರಾಗಬಹುದು ಎಂದು ತಿಳಿಸಲಾಗಿದೆ.
ಮುಂದಿನ ದಿನಗಳಲ್ಲಿ ಯೂ ಕ್ವಾರಂಟೈನ್ ಉಲ್ಲಂಘನೆ ಮಾಡಿದರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಯೂ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗೆ ಹೋದ ಮೇಲೆ ಖುಷಿ ಬಂದ ರೀತಿಯಲ್ಲಿ ತಿರುಗಾಟ ನಡೆಸಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಡೋಂಟ್ ಕ್ಯಾರ್ ಎಂದವರಿಗೆ ಕಾದಿದೆ ಶಿಕ್ಷೆ.

- Advertisement -

Related news

error: Content is protected !!