ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಕೊರೊನಾ ಸೋಂಕಿತ ಬಾಣಂತಿ ಸಾವನ್ನಪ್ಪಿದ ಘಟನೆ ನಾಗರಬಾವಿಯಲ್ಲಿ ನಡೆದಿದೆ. ಕಳೆದ 6 ದಿನಗಳ ಹಿಂದೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ನಂತರ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಕಳೆದ ಒಂದು ವಾರದಿಂದ ಚಿಕಿತ್ಸೆಗಾಗಿ ಅವರ ಕುಟುಂಬ ಪರದಾಡಿದೆ. ನಿನ್ನೆ ತಡರಾತ್ರಿವರೆಗೆ ಬೆಡ್ ಸಿಗದ ಹಿನ್ನಲೆಯಲ್ಲಿ 26 ವರ್ಷದ ಬಾಣಂತಿ ಆ್ಯಂಬುಲೆನ್ಸ್ ನಲ್ಲಿ ಅಲೆದಾಡಬೇಕಿತ್ತು. ನಂತರ ಆರೋಗ್ಯಾಧಿಕಾರಿಗಳು ಕರೆ ಮಾಡಿದ್ರೂ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ.
ಬಳಿಕ ಬಾಣಂತಿ ಕುಟುಂಬದವರು ಶಾಸಕಿ ಸೌಮ್ಯ ರೆಡ್ಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಅವರು ಬಾಣಂತಿಗೆ ಬೆಡ್ ಬೇಕು ಎಂದು ಟ್ವೀಟ್ ಮಾಡಿ ಸರ್ಕಾರದ ಗಮನಕ್ಕೆ ತಂದಿದ್ದರು. ಆದ್ರೂ ಕೂಡ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಬಳಿಕ ಬಾಣಂತಿಗೆ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಮೃತಪಟ್ಟಿದ್ದಾರೆ. 6 ದಿನದ ಹಸುಗೂಸನ್ನು ಬಿಟ್ಟು ಬಾಣಂತಿ ಇಹಲೋಕ ತ್ಯಜಿಸಿದ್ದು, ಮೃತ ಮಹಿಳೆಯ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
Arranged at Narayana hrudayala hospital finally. Thanks so much Mr Harsha & all of you for your support! God bless u all
— Sowmya Reddy (@Sowmyareddyr) July 30, 2020